ಮುಗಿಯದ ಪಯಣ

ಎಷ್ಟು ಕಾಶಿ ಕ್ಷೇತ್ರ ಸುತ್ತಿದರೇನು? ಪ್ರಯೋಜನ
ಮನದಲ್ಲಿ ಶುದ್ಧ ಭಾವ ಇಲ್ಲದನಕ್ಕರ
ಎಷ್ಟು ಗುಡಿಯೊಳು ಹೊಕ್ಕು ಭಜನೆ ಮಾಡಿದರೇನು ? ಪ್ರಯೋಜನ
ಆಚಾರ ಇಲ್ದದನಕ್ಕರ ….
ಎಷ್ಟು ಮನೆಗಳನ್ನು ಕಟ್ಟಿದರೇನು ಪ್ರಯೋಜನ ?
ಮನದಲ್ಲಿ ಶಾಂತಿ ಇಲ್ಲದನಕ್ಕರ
ಎಷ್ಟು ಬಹುಮಾನ ಪಡೆದರೇನು? ಪ್ರಯೋಜನ
ಬೆಲೆ ಇಲ್ಲದನಕ್ಕರ …..
ಎಷ್ಟು ಮದುವೆಯ ಮಾಡಿದರೇನು? ಪ್ರಯೋಜನ
ಮನೆಯಲ್ಲಿ ಮಗಳು ಇಲ್ಲದನಕ್ಕರ ….
ಎಷ್ಟು ಜನ ರನ್ನು ಸಂಪಾದಿಸಿದರೇನು? ಪ್ರಯೋಜನ
ಸತ್ತಾಗ ಬಾರದನಕ್ಕರ…
ಎಷ್ಟು ತಾತ್ವಿಕ ವಿಚಾರ ಇದ್ದರೇನು? ಪ್ರಯೋಜನ
ತತ್ವ ಪಾಲಿಸದನಕ್ಕರ ….
ಎಷ್ಟು ಸಭೆಗಳಲ್ಲಿ ಮಾತನಾಡಿದರೇನು ? ಪ್ರಯೋಜನ
ಮಾನಿನಿಯನ್ನು ಗೌರವಿಸದನಕ್ಕರ
ಎಷ್ಟು ದಾನ ಧರ್ಮ ಮಾಡಿದರೇನು ? ಪ್ರಯೋಜನ
ತಂದೆ -ತಾಯಿಯನ್ನು ನೋಡದಿದ್ದನಕ್ಕರ ….
ಎಷ್ಟು ಆಸ್ತಿ ಮಾಡಿದರೇನು ? ಪ್ರಯೋಜನ
ಆಯುಷ್ಯ ಇಲ್ಲದನಕ್ಕರ ….
ಎಷ್ಟು ಶಿಕ್ಷಣ ಕಲಿತರೇನು ? ಪ್ರಯೋಜನ
ಚಾರಿತ್ರ್ಯ ಇಲ್ಲದನಕ್ಕರ ….
ಎಷ್ಟು ಪುಸ್ತಕ ಬರೆದರೇನು? ಪ್ರಯೋಜನ
ಓದದಿದ್ದನಕ್ಕರ …
ಎಷ್ಟು ಮಾತನಾಡಿದರೇನು? ಪ್ರಯೋಜನ
ಕೇಳದಿದ್ದನಕ್ಕರ ..
ಎಷ್ಟು ಮಕ್ಕಳನು ಹೆತ್ತರೇನು? ಪ್ರಯೋಜನ
ಗುಣ ಇಲ್ಲದನಕ್ಕರ ….
ಎಷ್ಟು ಹಾಡಿದರೇನು? ಪ್ರಯೋಜನ
ಕಿವಿ ಇಲ್ಲದನಕ್ಕರ …..
ಎಷ್ಟು ಪೂಜೆ ಮಾಡಿದರೇನು? ಫಲ
ಅರಿಷಡ್ವರ್ಗ ಗಳನ್ನು ಗೆಲ್ಲದನಕ್ಕರ
ಎಷ್ಟು ಅರಿತರೇನು? ಪ್ರಯೋಜನ
ಹುಟ್ಟು ಸಾವಿನ ಗುಟ್ಟನು ಅರಿಯದನಕ್ಕರ …

ಶ್ರೀಮತಿ ಸಾವಿತ್ರಿ ಮಹಾದೇವಪ್ಪ ಕಮಲಾಪೂರ. ಮೂಡಲಗಿ

Don`t copy text!