ಗಜಲ್
ಮನದಲ್ಲಿ ಅಡಗಿದ ಭಾವನೆಗಳಿಗೆ ಧ್ವನಿ
ಯಾಗುವವರಾರು ಸಖಿ
ಎಷ್ಟು ಹೇಳಿದರೂ ಕೇಳದ ವಿಚಾರಗಳಿಗೆ
ಕಿವಿಯಾಗುವವರಾರು ಸಖಿ
ಮನಸಿನ ದುಗುಡಗಳಿಗೆ ರೂಪ ಕೊಡದೆ
ಹೋದೆ
ಮಾಸದ ಗಾಯಗಳಿಗೆ ಮುಲಾಮು
ಸವರುವವರಾರು ಸಖಿ
ಬಿತ್ತರಗೊಳ್ಳದ ಕಲ್ಪನೆಗಳು ನೂರಾರು
ಇವೆ
ನನ್ನೀ ತುಮುಲಗಳಿಗೆ ತೇಪೆ ಹಚ್ಚು
ವವರಾರು ಸಖಿ
ನಿರ್ಜೀವ ತುಂಬಿದ ಕಾಷ್ಟದಂತೆ
ಬಾಡಿಹೋಗಿದ್ದೇನೆ
ಹೃದಯದ ಕಂಪನವ ಹಿಡಿತಕ್ಕೆ
ತರುವವರಾರು ಸಖಿ
ಬೆಚ್ಚಿಬೀಳುತ್ತಿದ್ದೇನೆ ಅನುದಿನವೂ
ಸೊಗಸಿಲ್ಲದೆ
ನಶಿಸಿಹೋಗುತ್ತಿರುವ ಬಾಳಿಗೆ ಒರತೆ
ತುಂಬುವವರಾರು ಸಖಿ
ಬೇಡದ ಸುಖವ ಅಪ್ಯಾಯಮಾನವಾಗಿ
ಅಪ್ಪಿಕೊಳ್ಳಲೇ
ಬೇಡವೆಂದರೂ ಬಾರದ ಊರಿಗೆ ಹೊರಟ ನನಗೆ ಸುಧೆಯ ಕೊಟ್ಟು ಉಳಿಸುವವರಾರು ಸಖಿ
–ಸುಧಾ ಪಾಟೀಲ್
ಬೆಳಗಾವಿ