ಗಜಲ್
ನನ್ನ ಹಣೆಬರಹದ ಲಿಪಿಗೆ ಕಂಡಕಂಡವರೆಲ್ಲರೂ ಅತ್ತಿದ್ದಾರೆ
ಗೊತ್ತಿಲ್ಲ ಎಲ್ಲ ಎಲ್ಲಿಹೋದರು? ನನಗೆ ನನ್ನವರೆಲ್ಲರೂ ಸತ್ತಿದ್ದಾರೆ
ಚಂದ್ರನಿಗೂ ಗರ್ವ ಅತಿಯಾದಾಗ ಯಾರು ಏನು ಮಾಡಬಲ್ಲರು?
ಕಾಲಕೂಡಿ ಬಂದಾಗ ತಾರೆಗಳು ಬಾಣತೊರೆದುದ ಎಲ್ಲರೂ ಕಂಡಿದ್ದಾರೆ
ಬಾಗಿಲಿಗೆ ಬೀಗ ಜಡಿದು ಕೊಣೆಯಂತಾದ ಹೃದಯ ಭಯಾನಕ
ಒಳಗೆ ಉಸಿರುಗಟ್ಟಿ ನರಳಿದ್ದೇನೆ, ಕಣ್ಣಾರೆ ಯಾರೂ ಕಾಣದಾಗಿದ್ದಾರೆ
ಪಾತ್ರ ಒಪ್ಪಲಿಲ್ಲಂತ ಕಥೆಯಿಂದ ಬೇರ್ಪಟ್ಟು ಹೊರಗೆ ನಡೆದೆ
ರಂಡೆಗಂಡನ ಜಾತ್ರೇಲಿ ಉಂಡೋನೆ ಜಾಣ ಅಂತ ಪಂಕ್ತಿಗೆ ಉಂಡವರೂ ಕೂತಿದ್ದಾರೆ
ಮಂದಿರ ಮಸೀದಿ ಚರ್ಚಗಳ ಚರ್ಚೆ ವಿವಾದಗಳಿಂದ ಮುಕ್ತಳೆಂದಿಗೂ ಜ್ಯೋತಿ
ಉರಿಯೋಬತ್ತಿ ಕರಗೋಎಣ್ಣೆ ತರಹ ಬೂದಿಯಾಗಲು ಭಸ್ಮಾಸುರರೂ ಕಾಯುತ್ತಿದ್ದಾರೆ
–ಜ್ಯೋತಿ ಮಾಳಿ