ಸಾಹಿತಿ ಶಂಕರ ದೇವರು ಹಿರೇಮಠ ಅವರ ಕೃತಿಗೆ ಕ.ಸಾ.ಪ ದತ್ತಿ ಪ್ರಶಸ್ತಿ
ಕಲ್ಯಾಣ ಕರ್ನಾಟಕದ ಯುವ ಸಾಹಿತಿ,ಲೇಖಕ, ಶಿಕ್ಷಕ ಶಂಕರ ದೇವರು ಹಿರೇಮಠ ಅವರ ಮಕ್ಕಳ ಬಾಳಿನ ಬೆಳಕು ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ದೊರೆತಿದೆ.ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಮಾಚ೯ ೧೨ ಭಾನುವಾರದಂದು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಇರುವ ಶ್ರೀ ಕೃಷ್ಣರಾಜ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಕ್ಕಳ ಸಾಹಿತಿ ಶಂಕರ ದೇವರು ಹಿರೇಮಠ ಅವರು ಮಕ್ಕಳಿಗಾಗಿ ಬರೆದ ಮಕ್ಕಳ ಬಾಳಿನ ಬೆಳಕು ಅಕ್ಷರ ಜ್ಯೋತಿ ಸಾವಿತ್ರಿಬಾಯಿ ಫುಲೆ ಕೃತಿಯು ಸಾವಿತ್ರಿಬಾಯಿ ಫುಲೆ ಅವರು ಮಕ್ಕಳಿಗಾಗಿ ಅವರು ನೀಡಿದ ಕೊಡುಗೆ ಕುರಿತಾಗಿ ವಿವರ ಇದೆ.ಅಂದಿನ ದಿನಗಳಲ್ಲಿ ಮಕ್ಕಳಿಗಾಗಿ ಶಾಲೆಗಳನ್ನು ತೆರೆದು ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಹಾಗೂ ಅವರು ಅನುಭವಿಸಿದ ಅವಮಾನ, ಕಷ್ಟ ಗಳ ಕುರಿತು ಮಕ್ಕಳಿಗೆ ತಿಳಿಸುವ ಜೀವನ ಚರಿತ್ರೆ ರಚನೆಯಾಗಿದೆ.
ಶಂಕರ ದೇವರು ಹಿರೇಮಠ ಅವರಿಗೆ ಕ.ಸಾ.ಪ ದತ್ತಿ ಪ್ರಶಸ್ತಿ ದೊರೆತಿರುವುದು ಸಂತೋಷ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಂಗಣ್ಣ ಪಾಟೀಲ್ ಅಳ್ಳುಂಡಿ, ಮಾಜಿ ಜಿಲ್ಲಾ. ಕಸಾಪ ಅಧ್ಯಕ್ಷರಾದ ಎಸ್.ಶರಣೇಗೌಡ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬೀರಪ್ಪ ಶಂಬೋಜಿ, ತಾಲೂಕು ಕಸಾಪ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಸಾಹಿತಿಗಳಾದ ಮೌಲಪ್ಪ ಮಾಡಶಿರವಾರ, ಶ್ರೀಶೈಲ ಅಂಬಿಗೇರ, ದುರುಗಪ್ಪ ಗುಡದೂರ, ವಿರುಪಾಕ್ಷಪ್ಪ ಅವರು ಅಭಿನಂದಿಸಿದ್ದಾರೆ.