ಹಳೆ ಕ್ಯಾತನಟ್ಟಿಯಲ್ಲಿ ನಿಧಿ ಶೋಧ, ದೇವಸ್ಥಾನದ ಮುಂಬಾಗದಲ್ಲಿ ಗುಂಡಿ ತೋಡಿದ ನಿಧಿಗಳ್ಳರು

ಹಳೆ ಕ್ಯಾತನಟ್ಟಿಯಲ್ಲಿ ನಿಧಿ ಶೋಧ, ದೇವಸ್ಥಾನದ ಮುಂಬಾಗದಲ್ಲಿ ಗುಂಡಿ ತೋಡಿದ ನಿಧಿಗಳ್ಳರು

e-ಸುದ್ದಿ ಸುದ್ದಿ ಮಸ್ಕಿ

ಮಸ್ಕಿ ಪಟ್ಟಣದ ಸಮೀಪದ ಹಳೆ ಕ್ಯಾತನಟ್ಟಿಯಲ್ಲಿ ನಿಧಿ ಶೋಧ ನಡೆದಿರುವ ಘಟನೆ ಶನಿವಾರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಹಳೆ ಕ್ಯಾತನಟ್ಟಿಯ ಪುರಾತನ ಕಾಲದ ವೀರಭದ್ರೇಶ್ವರ ದೇವಸ್ಥಾನದ ಗರ್ಭ ಗುಡಿಯ ಹಿಂಭಾಗದಲ್ಲಿ ಈ ಘಟನೆ ನಡೆದಿದೆ. ಸ್ಥಳದಲ್ಲಿ ಪೂಜಾ ಸಾಮಾಗ್ರಿಗಳು, ಸಿಹಿ ತಿನಿಸು, ಲಿಂಬೆ ಹಣ್ಣು, ಅರಿಸಿನ ಕೊಂಬು, ಬಾಳೆ ಹಣ್ಣು ಇತರೆ ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಗಿದೆ.
ಅದರ ಪಕ್ಕದಲ್ಲೇ ವೃತ್ತಕಾರದಲ್ಲಿ ೩ ಅಡಿಗಳಷ್ಟು ಗುಂಡಿ ಅಗೆಯಲಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ವೀರಭದ್ರೇಶ್ವರ ಹಾಗೂ ಆಂಜನೇಯ ದೇವಸ್ಥಾನಕ್ಕೆ ತೆರಳಿದ್ದ ಭಕ್ತರಿಗೆ ನಿಧಿಗಾಗಿ ಪೂಜೆ ಮಾಡಿದ್ದು ಹಾಗೂ ಭೂಮಿ ಅಗೆದಿದ್ದು ಕಂಡು ಬಂದಿದೆ.
ಹಳೆ ಕ್ಯಾತನಟ್ಟಿಗೆ ಪುರಾತನ ಇತಿಹಾಸ ಇದ್ದು ಹಲವಾರು ಭಾರಿ ಈ ಜಾಗದಲ್ಲಿ ನಿಧಿಗಳ್ಳರಿಂದ ನಿಧಿ ಶೋಧಗಳು ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಸಿಂಧನೂರಿನಲ್ಲಿ ಚಿನ್ನದ ನಾಣ್ಯಗಳು ಸಿಕ್ಕಿದ್ದು ತನಿಖೆ ನಡೆಸಿದಾಗ ಅವುಗಳನ್ನು ಹಳೆ ಕ್ಯಾತನಟ್ಟಿಯಲ್ಲಿ ಸಿಕ್ಕಿದ್ದವು ಎಂದು ಕಳ್ಳರು ಪೊಲೀಸ್‌ರ ಮುಂದೆ ತಪ್ಪೊಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಳೆ ಕ್ಯಾತನಟ್ಟಿ ಹಾಗೂ ಅದರ ಮುಂಭಾಗದ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಿಷೇಧಿತ ಪ್ರದೇಶ ಸುಳಿ ದಿಬ್ಬ ಸುತ್ತಮುತ್ತ ನಿಧಿ ಶೋಧನೆ ನಡೆಯುತ್ತಿದ್ದರು ಸಹ ಪುರಾತತ್ವ ಇಲಾಖೆ ಅಧಿಕಾರಿಗಳು ಮೌನವಹಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Don`t copy text!