ಲಿಂಗಸಗೂರಿನಲ್ಲಿ ಮಾರ್ಚ ೩ರಂದು ಛಲವಾದಿ ಮಹಾಸಭಾದ ಜಿಲ್ಲಾ ಸಮಾವೇಶ – ಅಶೋಕ

e-ಸುದ್ದಿ ಸುದ್ದಿ ಮಸ್ಕಿ

ಲಿಂಗಸುಗೂರು ಪಟ್ಟಣದಲ್ಲಿ ಮಾರ್ಚ ೩ ರಂದು ಛಲವಾದಿ ಮಹಾಸಭಾದಿಂದ ಜಿಲ್ಲಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಛಲವಾದಿ ಮಹಾಸಭಾದ ಮಸ್ಕಿ ತಾಲೂಕಾಧ್ಯಕ್ಷ ಅಶೋಕ ಕಟ್ಟಿಮನಿ ಹೇಳಿದರು.
ಮಸ್ಕಿ ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಛಲವಾದಿ ಸಮಾಜ ರಾಜಕೀಯವಾಗಿ ವಂಚಿತಗೊAಡಿದ್ದರಿAದ ಮುಂಬರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಛಲವಾದಿ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕೆಂಬ ಉದ್ದೇಶದಿಂದ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
ಲಿAಗುಸುಗೂರು ವಿಧಾನ ಸಭಾ ಕ್ಷೇತ್ರ ಎಸ್.ಸಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿಯವೆರಗೂ ಎಡ-ಬಲ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಆದ್ದರಿಂದ ಮುಂದಿನ ಚುನಾವಣೆಲ್ಲಿ ಛಲವಾದಿ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕೆಂದರು.
ಲಿAಗಸುಗೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಸಮಾವೇಶಕ್ಕೆ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಶಿವರಾಮ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಚಿತ್ತಾಪೂರು ಶಾಸಕ ಪ್ರಿಯಾಂಕ ಖರ್ಗೆ, ಹುಬ್ಬಳಿ ಗ್ರಾಮೀಣ ಶಾಸಕ ಪ್ರಸಾದ ಅಬ್ಬಾಯ್ಯ, ಮುಳವಳ್ಳಿ ಶಾಸಕ, ಕೆ.ಅನ್ನದಾನಿ, ಮಾಜಿ ಸಚಿವೆ ಮೋಟಮ್ಮ, ಆರ್.ಮಾನಸಯ್ಯ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ನಾಗಲಿಂಯಸ್ವಾಮಿ ಮಾನ್ವಿ ಸೇರಿದಂತೆ ಜಿಲ್ಲೆಯ ಛಲವಾದಿ ಸಮಾಜದ ಮುಖಂಡರು, ಯುವಕರು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಮಸ್ಕಿ ತಾಲೂಕಿನಿಂದ ೧೫ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಲ್ಲಪ್ಪ ಗೋನಾಳ, ಸುರೇಶ ಬಸ್ಸಾಪೂರು, ನಾಗರತ್ನ, ಹುಲಗಪ್ಪ ಹಸಮಕಲ್ ಸೇರಿದಂತೆ ಇನ್ನಿತರರಿದ್ದರು.

Don`t copy text!