ಇರಕಲ್ ಗ್ರಾಮದ ರಸ್ತೆ ದುರಸ್ತಿಗೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಮನವಿ
e-ಸುದ್ದಿ ಮಸ್ಕಿ
ತಾಲೂಕಿನ ಇರಕಲ್ ಗ್ರಾಮದ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಸ್ಕಿ ತಾಲೂಕು ದಲಿತ ವಿದ್ಯಾರ್ಥಿ ಪರಿಷತ್‌ನ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಟಗಲ್ ಗ್ರಾಮ ಪಂಚಾಯತಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಮಸ್ಕಿ ತಾಲೂಕಿನ ಇರಕಲ್ ಗ್ರಾಮಕ್ಕೆ ಈಗಾಗಲೇ ಸಾರಿಗೆ ಇಲಾಖೆಯ ಬಸ್ ಓಡಾಟ ನಡೆಸುತ್ತಿದೆ. ಆದರೆ ಗ್ರಾಮದ ಪ್ರವೇಶದ ಮುಖ್ಯ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಕಟ್ಟೆ ಕಟ್ಟುವುದು, ಎತ್ತುಗಳನ್ನು ಕಟ್ಟುವುದು, ಎತ್ತಿನ ಬಂಡಿ ನಿಲ್ಲಿಸುವುದು, ಎಲ್ಲೆಂದರಲ್ಲಿ ಗುಂಡಿಗಳನ್ನು ತೆಗೆಯುವುದು ಸೇರಿ ಇತರೆ ಕೆಲಸಗಳ ಮೂಲಕ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆಯಾಗುವAತೆ ಮಾಡಲಾಗುತ್ತಿದೆ.
ಈ ಬಗ್ಗೆ ಈಗಾಗಲೇ ಗ್ರಾಮದಲ್ಲಿಯೇ ಚರ್ಚೆ ನಡೆಸಿ ತಿಳಿ ಹೇಳಿದರೂ ಕೆಲವರು ಕೇಳುತ್ತಿಲ್ಲ. ಹೀಗಾಗಿ ಸಂಬAಧಿಸಿದ ಅಧಿಕಾರಿಗಳು ಮಧ್ಯ ಪ್ರವೇಶಿಸಿ ರಸ್ತೆಗೆ ಅಡ್ಡಲಾಗಿ ಇರುವ ಎಲ್ಲವನ್ನು ತೆರವು ಮಾಡಬೇಕು. ಇಲ್ಲಿನ ರಸ್ತೆಯನ್ನು ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುವು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತ ವಿದ್ಯಾರ್ಥಿ ಪರಿಷತ್‌ನ ಸಂಚಾಲಕ ಮೌನೇಶ ತುಗ್ಗಲದಿನ್ನಿ, ಸಂಘಟನಾ ಕಾರ್ಯದರ್ಶಿ ಹುಸೇನಪ್ಪ, ವಿದ್ಯಾರ್ಥಿಗಳಾದ ಚನ್ನಬಸವ, ದೇವರಾಜ, ಆಂಜನಪ್ಪ, ಮೌನೇಶ, ಶಿವಗ್ಯಾನಿ, ಮಲ್ಲೇಶ ಸೇರಿ ಇತರರು ಇದ್ದರು