ಮಸ್ಕಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ
e-ಸುದ್ದಿ ಮಸ್ಕಿ
ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿಂಧನೂರಿಗೆ ಹೋಗುವ ಮಾರ್ಗಮದ್ಯೆ ಮಸ್ಕಿ ಪಟ್ಟಣಕ್ಕೆ ಶನಿವಾರ ಆಗಮಿಸಿದರು.
ಪಟ್ಟಣದ ಬಸವೇಶ್ವರ ಮೂರ್ತಿಗೆ ನಳಿನ್ ಕುಮಾರ ಕಟೀಲ್ ಮಾಲಾರ್ಪಣೆ ಮಾಡಿದರು.
ಬಿಜೆಪಿ ಕಾರ್ಯಕರ್ತರು ಅವರನ್ನು ಪಟಾಕಿ ಸಿಡಿಸಿ ಸ್ವಾಗತಿಸಿದರು.
ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಹರಳಹಳ್ಳಿ ಅವರು ರಾಜ್ಯಾಧ್ಯಕ್ಷರಿಗೆ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್ ಹಾಗೂ ಮಲ್ಲಪ್ಪ ಅಂಕುಶದೊಡ್ಡಿ ಅಂದಾನಪ್ಪ ಗುಂಡಳ್ಳಿ, ಡಾಕ್ಟರ್ ಬಿ ಎಚ್ ದಿವಟರ ದೊಡ್ಡಪ್ಪ ಕಡಬೂರು , ಬಸಪ್ಪ ಬ್ಯಾಳಿ , ಡಾಕ್ಟರ್ ಪಂಚಾಕ್ಷರಯ್ಯ ಸ್ವಾಮಿ ಬಿಜೆಪಿ ಯುವ ಮುಖಂಡರಾದ ಪ್ರಸನ್ನ ಪಾಟೀಲ್ ಹಾಗೂ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಶರಣಬಸವ ಸೊಪ್ಪಿಮಠ ಮಸ್ಕಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ್ ಮಸ್ಕಿ ಪುರಸಭೆ ಸದಸ್ಯರಾದ ಚೇತನ್ ಪಾಟೀಲ್, ಸುರೇಶ್ ಹರಸೂರು ಮಲ್ಲಿಕಾರ್ಜುನ್ ಬ್ಯಾಳಿ, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು ಶರಣಯ್ಯ ಗುಡದೂರು ಬಸವರಾಜ್ ಬುಕ್ಕಣ್ಣ ಅಭಿಜಿತ್ ಮಾಲಿ ಪಾಟೀಲ್ ಮೌನೇಶ್ ನಾಯಕ್ ಮಲ್ಲಿಕಾರ್ಜುನ ಬೈಲುಗುಡ್ಡ ಹಾಗೂ ಇತರರು ಇದ್ದರು