ರೈತ ನಾಯಕನ ಹುಟ್ಟು ಹಬ್ಬದ ನಿಮಿತ್ಯ ಆಸ್ಪತ್ರೆ,ಅನಾಥಾಶ್ರಮದಲ್ಲಿ ಹಣ್ಣು ಹಂಪಲ ವಿತರಣೆ….

e-ಸುದ್ದಿ ವರದಿ: ಇಳಕಲ್

ದೇಶ ಕಂಡಂತಹ ಅಪ್ರತಿಮ ರಾಜಕಾರಣಿ, ರೈತ ನಾಯಕ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಇಳಕಲ್ ನಗರದಲ್ಲಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಇವರ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಅನಾಥಾಶ್ರಮದಲ್ಲಿ ಬ್ರೆಡ್, ಹಣ್ಣು ಹಂಪಲ ವಿತರಿಸಿದರು.

ನಗರದ ಸರ್ಕಾರಿ ಭೇಟಿ ನೀಡಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಆಸ್ಪತ್ರೆಯಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸುವುದರ ಜೊತೆಗೆ ಬ್ರೆಡ್ ಹಣ್ಣು ಹಂಪಲ ವಿತರಿಸಿದರು. ಅಲ್ಲದೆ ನಗರದ ಅಮ್ಮ ಸೇವಾ ಸಂಸ್ಥೆಯಲ್ಲಿ ನಿವಾಸಿಗಳಿಗೆ ಹಣ್ಣು
ಹಂಪಲ ವಿತರಿಸಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅರವಿಂದ ಮಂಗಳೂರು, ಗ್ರಾಮೀಣ ಮಂಡಲದ ಅಧ್ಯಕ್ಷ ಮಹಾಂತಗೌಡ ಪಾಟೀಲ್, ಹಾಗೂ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!