ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ವೃತ್ತ ಉದ್ಘಾಟಿಸಿದ ಡಾ.ಚೆನ್ನಬಸವ ದೇಶಿಕೆಂದ್ರ ಶಿವಾಚಾರ್ಯರು..

e-ಸುದ್ದಿ ವರದಿ:ಇಳಕಲ್

ಶ್ರೀ ಆದಿಜಗದ್ಗುರು ರೇಣುಕಾಚಾರ್ಯರ ಜಯಂತಿಯ ಅಂಗವಾಗಿ ಇಂದು ಇಲಕಲ್ಲ ನಗರದ ಐಬಿ ಎದುರುಗಡೆ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ವೃತ್ತವನ್ನು ನಂದವಾಡಗಿ ಶ್ರೀಮಠದ ಪರಂಪೂಜ್ಯರಾದ ಡಾ.ಚೆನ್ನಬಸವ ಶಿವಾಚಾರ್ಯರು ಉದ್ಘಾಟಿಸಿದರು.

ಉದ್ಘಾಟನಾ ಸಂದರ್ಭದಲ್ಲಿ
ಯವನಾಯಕ ರಾಜುಗೌಡ ದೊಡ್ಡನಗೌಡ ಪಾಟೀಲ್, ಸಿದ್ದಲಿಂಗಯ್ಯ ನವಲಿ ಹಿರೇಮಠ, ಗೌರಮ್ಮ ಕಾಶಪ್ಪನವರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಧ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ನಾಯಕರುಗಳಿಗೆ ಜಂಗಮ ಸಮಾಜದವರಿಂದ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಜಂಗಮ ಸಮಾಜದ ಹಿರಿಯರು ಯುವಕರು ತಾಯಂದಿರು ಮತ್ತಿತರರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!