ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು .

ಶ್ವಾನ ಮಡಕೆಯನಿಳುಹಿ ಬೋನವನುಂಡು
ಮಡಕೆಯನೇರಿಸಲರಯದ೦ತೆ
ನಾನು ಷಟಸ್ಥಲವನ್ನೊದಿ ಏನ ಮಾಡುವೆನಯ್ಯಾ,
ಅವಗುಣ೦ಗಳೆನ್ನ ಬೆನ್ನ ಬಿಡದನ್ನಕ್ಕರ?
ಕಾರ್ಯವುಳ್ಳ ಕರ್ತಾ ಜಂಗಮಲಿಂಗದಲ್ಲಿ,
ನಾನು ದಾಸೋಹವ ಮಾಡಲರಿಯದೆ ಕೆಟ್ಟೆನು .
ಕೂಡಲಸಂಗಮದೇವಾ.

( ಸ ವ ಸ೦-೧ -೧೩೬೫ ಪುಟ ೩೭೬)

ಪ್ರಸಕ್ತ ವಚನದಲ್ಲಿ ಬಸವಣ್ಣನವರು ತಮ್ಮ ಬದುಕನ್ನು ದಾಸೋಹಕ್ಕೆ ಹೇಗೆ ಮೀಸಲಾಗಿಡಬೇಕು ಎಂಬ ವಿಚಾರವನ್ನು ಪ್ರಾಮಾಣಿಕ ಹಾಗೂ ಅರ್ಥಪೂರ್ಣವಾಗಿ ಹೇಳಿದ್ದಾರೆ.
ಹಸಿದ ನಾಯಿ( ಶ್ವಾನ) ಮಡಿಕೆಯೋಳಗಿರುವ ಆಹಾರವನ್ನು ಭೋಜನವನ್ನು ಬೋನವನ್ನು ಉಂಡು ,ಮತ್ತೆ ಮಡಿಕೆಯನ್ನು ಸರಿಯಾಗಿ ಇರಿಸಲಾಗದೆ , ಮಡಿಕೆಯೊಳಗಿನ ಆಹಾರವನ್ನು ಅರಿಯದೆ ತನ್ನ ಒಡಲ ಹಸಿವು ತೃಪ್ತಿ ಗೋಳಿಸುವ೦ತೆ ಮಡಿಕೆಯನ್ನು ಚೆಲ್ಲಾಪಿಲ್ಲಿ ಮಾಡುವ ನಾಯಿಗೆ ಗೊತ್ತಿರದು ಮಡಿಕೆಯ ಮಹತ್ವ , ಶರಣರ ಅನುಭಾದ ದೀಪ್ತಿ ಎನಿಸಿದ ಷಟಸ್ಥಲ ಬಹುದೊಡ್ಡ ಕೊಡುಗೆ,ಅದೇ ರೀತಿ ಮನುಷ್ಯ ಇಂತಹ ಅಮೂಲ್ಯ ಕೊಡುಗೆಯಾದ ಷಟಸ್ಥಲವನ್ನು ನಿತ್ಯ ಓದಿ ಫಲವೇನು ? ಮನುಷ್ಯನ ಅವಗುಣಗಳು ಆತನ ಬೆನ್ನು ಬಿಡವು. ವಿಷಯವೆಂಬ ಅವಗುಣಗಳು ಮನುಷ್ಯನನ್ನು ಮತ್ತೆ ಮತ್ತೆ ಬೇಟೆ ಆಡುತ್ತವೆ .ಕಿಂಕರ ಇಂತಹ ಆಮಿಷಕ್ಕೆ ಒಳಗಾಗುತ್ತಾನೆ ಹಾಳಾಗುತ್ತಾನೆ. ಕಾರ್ಯವುಳ್ಳ ಕರ್ತಾ ಜಂಗಮಲಿಂಗದಲ್ಲಿ, ಕ್ರಿಯಾಶೀಲ ಸಮಾಜದಲ್ಲಿ ಸಮುದಾಯದಲ್ಲಿ ಜಂಗಮ ವ್ಯವಸ್ಥೆಯಲ್ಲಿ ,ಮನುಷ್ಯ ದಾಸೋಹ ಮಾಡದಿದ್ದರೆ ,ಅಣ್ಣ ದಾಸೋಹ ವಸ್ತ್ರ ದಾಸೋಹ ,ಜ್ಞಾನ ದಾಸೋಹ ಮುಂತಾದ ಹಲವು ಬಗೆಯ ದಾಸೋಹವ ಮಾಡದಿದ್ದರೆ ಆತನ ಪರಿಸ್ಥಿತಿ ಮಡಿಕೆಯನರಿಯದ ಶ್ವಾನದಂತೆ ಎಂದು ನಮ್ರ ಆತ್ಮ ವಿಡಂಬನೆಯ ಮೂಲಕ ಬಸವಣ್ಣನವರು ಹೇಳಿದ್ದಾರೆ. ಧರ್ಮ ಗ್ರಂಥ ಓದುವದು ಎಷ್ಟು ಮುಖ್ಯವೋ ಅದಕಿಂತ ಹೆಚ್ಚು ಅದನ್ನು ಪಾಲಿಸಬೇಕು .ಇದು ಅವರ ಕಳಕಳಿ ಮತ್ತು ನೀವೆದನೆ

–ಡಾ ಶಶಿಕಾಂತ .ಪಟ್ಟಣ ರಾಮದುರ್ಗ -ಪೂನಾ

One thought on “

Comments are closed.

Don`t copy text!