ಹೆಣ್ಣು ಹುಣ್ಣಲ್ಲ
ಹೆಣ್ಣು ಹುಣ್ಣೆಂದು
ಭಾವಿಸುವ ಮನಸ್ಥಿತಿಯಿಂದ
ಹೊರ ಬರಬೇಕಿದೆ ನೀವು…..
ಸಲ್ಲದ ಉಪಮಾನಗಳ ಕೊಟ್ಟು
ಅಪಮಾನ ಮಾಡುವುದನು ನಿಲ್ಲಿಸಬೇಕಿದೆ ನೀವು…
ಹೆಣ್ಣು ಹುಣ್ಣಿಮೆ ಎಂದರಿತರೆ
ಬಾಳೆ ಬೆಳದಿಂಗಳು ಎನ್ನುವ
ಸತ್ಯ ಒಪ್ಪಿಕೋಳ್ಳಬೇಕಿದೆ ನೀವು….
ಹೆಣ್ಣು ಹಣ್ಣಿನಂದಿದಿ
ಒಗರುಹುಳಿಗಳ ರುಚಿಗೆ ಬದಲಿಸಿ
ಮಾಗಿದಸಿಹಿ ತಿಳಿಯಬೇಕಿದೆ ನೀವು..
ಹೆಣ್ಣು ಹಣತೆಯಾಗಿ ತೈಲ ಬತ್ತಗಳನು ಹಿಡಿದುಸುಡುವ ಜ್ಯೋತಿಗೆ ಕಾಂತಿ ತಿಳಿಯಬೇಕಿದೆ ನೀವು …..
ಹೆಣ್ಣು ಹತ್ತವತಾರವ ಹೊತ್ತು
ಮನುಕುಲ ಸಾಕಿಸಲಹುವ
ಮಮತೆಯ ಮಡಿಲೆಂದರಿಬೇಕು ನೀವು
ಹೆಣ್ಣಿಲ್ಲದೆ ಹಸುನಾಗದು ಬದುಕು ಪುರುಷ ಕುಲಕಸ್ತಿತ್ವವ ತಂದ
ಬತ್ತದ ಪ್ರೀತಿಯ ಸೆಲೆಯೆಂದರಿಯಬೇಕಿದೆ ನೀವು
–ಡಾ. ನಿರ್ಮಲ ಬಟ್ಟಲ