ಮಸ್ಕಿ ಪಟ್ಟಣದಲ್ಲಿ ಮಾ.೧೧ರಂದು ಬಿಜೆಪಿಯಿಂದ ಬಹಿರಂಗ ಸಭೆ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ

 

e-ಸುದ್ದಿ ಮಸ್ಕಿ

ಮಸ್ಕಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ಆರಂಭವಾದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಮಾರ್ಚ್ ೧೧ರಂದು ಮಸ್ಕಿ ಪಟ್ಟಣಕ್ಕೆ ಆಗಮಿಸಲಿದೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಮಸ್ಕಿ ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಮಧ್ಯಾಹ್ನ ೧೨ ಗಂಟೆಗೆ ಪೊಲೀಸ್ ಠಾಣೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿ ಅಭಿಮಾನಿಗಳು ಹೊರ ತಂದ ಅಭಿನಂದನಾ ಗ್ರಂಥವನ್ನು ಸಹ ಅವರು ಬಿಡುಗಡೆ ಮಾಡಲಿದ್ದಾರೆ ಎಂದರು.
ಸುಮಾರು ೩೦ ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸಚಿವರಾದ ಭಗವಂತ ಕೂಬಾ, ಶ್ರೀರಾಮುಲು, ಆನಂದ ಸಿಂಗ್, ಹಾಲಪ್ಪ ಆಚಾರ ಸೇರಿದಂತೆ ಅನೇಕ ಸಚಿವರು, ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಬಿಜೆಪಿ ಮುಖಂಡರಿಗೆ ಪುರಸಭೆ ಸದಸ್ಯ ರಮೇಶ ಗುಡಿಸಲಿ ಅವರ ಸೋಮನಾಥ ನಗರದ ನಿವಾಸದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸವಾಲು ಸ್ವೀಕರಿಸದ ಶಾಸಕ:- ಕ್ಷೇತ್ರಕ್ಕೆ ಬಂದ ಅನುದಾನದ ವಿಷಯದಲ್ಲಿ ಶಾಸಕ ಆರ್. ಬಸನಗೌಡ ಅವರ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ಹಲವಾರು ಬಾರಿ ಬಹಿರಂಗ ಚರ್ಚೆಗೆ ಕರೆದರೂ ಶಾಸಕರು ನಮ್ಮ ಸವಾಲನ್ನು ಸ್ವೀಕರಿಸುತ್ತಿಲ್ಲ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಆರೋಪಿಸಿದರು.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನದಿಂದ ಇಲ್ಲಿವರೆಗೆ ೯೦೦ ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ, ಶಾಸಕರು ಬಹಿರಂಗ ಸಭೆಗೆ ಎಲ್ಲಿ ಬಂದರೂ ನಾನು ದಾಖಲೆ ಸಮೇತ ಉತ್ತರ ಕೊಡುವೆ, ಶಾಸಕರು ಸುಳ್ಳು ಹೇಳಿ ಕ್ಷೇತ್ರದ ಜನರ ದಾರಿ ತಪ್ಪಿಸುವ ಕೆಲಸ ಬಿಡಬೇಕು ಎಂದರು. ಡಾ. ಬಿ.ಎಚ್. ದಿವಟರ್, ಬಸವರಾಜ ಸ್ವಾಮಿ, ಪಕ್ಷದ ಮಂಡಲ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ ಇದ್ದರು.

ತಪ್ಪು ತಿದ್ದಿಕೊಂಡಿರುವೆ
ಮಸ್ಕಿ ಕ್ಷೇತ್ರದಲ್ಲಿ ೧೨ ವರ್ಷ ರಾಜಕೀಯದಲ್ಲಿ ಶಾಸಕನಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿರುವೆ. ಕಳೆದ ಚುನಾವಣೆಯಲ್ಲಿ ಸೋಲಿಗೆ ಆತ್ಮವಲೋಕನ ಮಾಡಿಕೊಂಡಿದ್ದು ನನ್ನ ತಪ್ಪುಗಳು ಏನು ಎಂಬುದನ್ನು ಕಂಡುಕೊಂಡಿದ್ದೇನೆ. ಮತದಾರರ ನಿರೀಕ್ಷೆ ಮೀರಿ ಕೆಲಸ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ. ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ಆಗಬೇಕಿದ್ದು ಮತದಾರರ ಆಶೀರ್ವಾದದಿಂದ ಬರುವ ಚುನಾವಣೆಯಲ್ಲಿ ಕೆಲಸ ಮಾಡುವ ಯೋಜನೆ ರೂಪಿಸಿಕೊಂಡಿರುವೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೆಳಿದರು. ಮಸ್ಕಿ‌ ಪಟ್ಟಣದ 17 ನೇ ವಾರ್ಡನಲ್ಲಿ ಮತದಾರರಿಗೆ ಮನವರಿಕೆ ಮಾಡಿ ವಿವರಿಸಿದರು.
.

Don`t copy text!