ವೀರ ಸಾವರ್ಕರ್ ಸರ್ಕಲ್ ಮತ್ತು ಮೂರ್ತಿ ಲೋಕಾರ್ಪಣೆಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿದ ಪೂಜ್ಯರು ಹಾಗೂ ರಾಜುಗೌಡ ಪಾಟೀಲ್…
e-ಸುದ್ದಿ ವರದಿ:ಇಳಕಲ್
ಇಳಕಲ್: ವೀರ ಸಾವರ್ಕರ್ ಗ್ರಾಮೀಣ ಅಭಿವೃದ್ಧಿ ಕ್ರೀಡಾ ಮತ್ತು ಸಂಸ್ಕೃತಿಕ ಶಿಕ್ಷಣ ಸೇವಾ ಸಂಸ್ಥೆ (ರಿ) ಇಳಕಲ್ ಇವರ ವತಿಯಿಂದ ನಡೆಯುತ್ತಿರುವ ವೀರ ಸಾವರ್ಕರ್ ಸರ್ಕಲ್ ಮತ್ತು ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ಯ ಭವ್ಯ ಶೋಭಾಯಾತ್ರೆ ಕಂಠಿ ಸರ್ಕಲ್ ನಲ್ಲಿ ಪೂಜ್ಯ ಶ್ರೀ ಮಹಂತ ಸಹದೇವಾನಂದ ಗಿರಿಜೀಯವರು ಹಾಗೂ ಯುವನಾಯಕ ರಾಜುಗೌಡ ದೊಡ್ಡನಗೌಡ ಪಾಟೀಲ್ ವೀರ ಸಾವರ್ಕರ್ ಮೊಮ್ಮಗ
ಸತ್ಯಕೀ ಸಾವರ್ಕರ್ ಭವ್ಯ ಶೋಭಾಯಾತ್ರೆಗೆ ಹಾಗೂ ಮಹಿಳೆಯರ ಕುಂಭಮೇಳಕ್ಕೆ ಚಾಲನೆ ನೀಡಿದರು.
ಕುಂಭಮೇಳದಲ್ಲಿ ಸಾವಿರಾರು ಮಹಿಳೆಯರು ಕುಂಭ ಹೊತ್ತು ಭವ್ಯ ಶೊಭಾ ಯಾತ್ರೆಯಲ್ಲಿ ಪಾಲ್ಗೊಂಡರು. ಭವ್ಯ ಶೋಭಾ ಯಾತ್ರೆಯಲ್ಲಿ ಯುವಕರು ಹಿಂದುತ್ವದ ಹಾಡುಗಳಿಗೆ ಕುಣಿದು ಸಂತೋಷ ಪಟ್ಟರು.
ವೀರ ಸಾವರ್ಕರ್ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ಶಿವನ ವೇಷಧಾರಿಗಳು. ಸಾಕ್ಷಾತ್ ಪರಶಿವನ ರೂಪವೆಂಬಂತೆ ನೋಡುಗರ ಗಮನ ಸೆಳೆದರು.
ವರದಿಗಾರರು: ಶರಣಗೌಡ ಕಂದಕೂರ