ಗೋಳಗುಮ್ಮಟ…..

ಪ್ರವಾದ ಕಥನ

ಗೋಳಗುಮ್ಮಟ…..

ಗೋಳಗುಮ್ಮಟವಿರುವದು ದಕ್ಷಿಣ ಭಾರತದ ಆಗ್ರಾ, ಗುಮ್ಮಟ ನಗರಿ, ಕರ್ನಾಟಕದ ಪಂಜಾಬ್, ಸ್ಮಾರಕಗಳ ಬೀಡು, ಬಸವ ನಾಡು ಎಂದು ಕರೆಯಿಸಿಕೊಳ್ಳುವ ವಿಜಾಪುರದಲ್ಲಿ, ಕರ್ನಾಟಕದ 9 ಅತಿ ದೊಡ್ಡ ಜಿಲ್ಲೆ. 1ನವೆಂಬರ್ 2014 ರಂದು ಬಿಜಾಪುರಕ್ಕೆ.. ವಿಜಯಪುರ ಎಂದು ಮರು ನಾಮಕರಣ ಮಾಡಲಾಯಿತು.
ವಿಜಯಪುರ ಅಂದ್ರೆ ಗೋಳ ಗುಮ್ಮಟ ಅನ್ನುವಷ್ಟು ಖ್ಯಾತಿ.

ಈ ಗುಮ್ಮಟವು ವಿಶ್ವದ ಎರಡನೇ ಅತಿ ದೊಡ್ಡ ಗುಮ್ಮಟವಾಗಿದೆ. ಏಳು ಅದ್ಭುತಗಳಲ್ಲಿ ಒದೆಂದೂ ಗುರುತಿಸಲ್ಪಟ್ಟಿದೆ. ವಿಜಯಪುರದಲ್ಲಿ 83ಕಿಂತ ಹೆಚ್ಚು ಸ್ಮಾರಕಗಳಿವೆ. ಹಾಗಾಗಿ ವಿಜಯಪುರಕ್ಕೆ ಸ್ಮಾರಕಗಳ ನಗರ ಎನ್ನಲಾಗುತ್ತದೆ.
ಆದಿಲ್ ಶಾಹಿ ಮನೆತನದವರು ಶತ್ರುಗಳಿಂದ ರಕ್ಷಿಸಿಕೊಳ್ಳಲು ಕೋಟೆ ಹಾಗೂ ಕೋಟೆಯ ಮೇಲೆ ತೋಪುಗಳನ್ನು ಸುತ್ತಲೂ ನಿರ್ಮಿಸಿದ್ದರು. ಇಲ್ಲಿರುವ ಮಲಿಕ್ ಇ ಮೈದಾನ ತೋಪು ಪ್ರಸಿದ್ಧ ಹಾಗೂ 50 ಟನ ತೂಗುತ್ತದೆ.
ವಿಜಯಪುರವು ಪಂಚ ನದಿಗಳಾದ ಡೋಣಿ. ಭೀಮೆ. ಘಟಪ್ರಭಾ. ಮಲಪ್ರಭಾ ಕೃಷ್ಣ ಸುತ್ತುವರೆದಿದೆ. ಡೋಣಿ ತುಂಬಿ ಹರಿದರೆ ಊರೆಲ್ಲ ಜೋಳ ಎಂಬ ಖ್ಯಾತಿ ಇದೆ. ವಿಜಯಪುರ ದ್ರಾಕ್ಷಿಯ ಕಣಜ ಎಂದು ಪ್ರಸಿದ್ಧಿ.
ಗೋಳ ಗುಮ್ಮಟವು ಬೆಳಿಗ್ಗೆ 6ರಿಂದ ಸಾಯಂಕಾಲ 5ರವರೆಗೆ ತೆರೆದಿರುತ್ತದೆ. ಇದು ಸುಮಾರು 1626ರಿಂದ 56ರವರೆಗೆ ಅಂದ್ರೆ 30ವರ್ಷ ಕಟ್ಟಲು ಸಮಯವಕಾಶ ಬೇಕಾಯಿತು. ಟಿಕೆಟ್ ಕೌಂಟರ್ ಹತ್ತಿರ ಬ್ಯಾಟರಿ ಚಾಲಿತ ವಾಹನ.. ವೃದ್ಧರಿಗಾಗಿ, ಅಂಗವಿಕಲರಿಗಾಗಿ ವ್ಯವಸ್ಥೆ ಮಾಡಿದ್ದಾರೆ.
ಮೊದಲು ಕಾಣುವದು ವಿಶಾಲ ವಸ್ತು ಸಂಗ್ರಹಾಲಯ, ಇಲ್ಲಿ ಶಾಹಿ ಮನೆತನದ ವಸ್ತುಗಳು. ಪುಸ್ತಕಗಳು. ಅವರು ಬಳಸುತ್ತಿದ್ದ ಯುದ್ಧ ಸಾಮಗ್ರಿಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕಟ್ಟಡದ ಮುಂದೆ ತೋಪುಗಳನ್ನು ಸಂಗ್ರಹಿಸಿಟ್ಟಿ ದ್ದಾರೆ.ಈ ಕಟ್ಟಡಕ್ಕೆ ದೃಷ್ಟಿ ಕಟ್ಟಡ ಎಂದು ಕೂಡ ಕರೆಯುತ್ತಾರೆ.

ಗೋಳ ಗುಮ್ಮಟ ದ ಮೇಲೆ ನೇರ ದೃಷ್ಟಿ ಬೀಳದಿರಲಿ ಎಂದು ಈ ಎರಡು ಕಟ್ಟಡ ಕಟ್ಟಿದ್ದಾರಂತೆ.
ವಸ್ತು ಸಂಗ್ರಹಾಲಯದ ಹಿಂದೆ ಮತ್ತೊಂದು ವಿಶಾಲ ಕಟ್ಟಡ ಅದನ್ನೂ ದಾಟಿ ಹೋದರೆ ಗುಮ್ಮಟವಿದೆ. ಯಾವುದೇ ಕೋನದಿಂದ ನೋಡಿದರೂ ಮೂರೇ ಮಿನಾರ ಕಾಣಿಸುತ್ತದೆ. ಇದು ನಾಲ್ಕು ಮೀನಾರ ಹೊಂದಿದ ಬೃದಾಕಾರದ ಗುಮ್ಮಟ ಹೊಂದಿದ ಸ್ಮಾರಕ.

ಇಂಡೋ ಇಸ್ಲಾಮಿಕ್ ಶೈಲಿಯಲ್ಲಿ ಕಾಣಬಹುದು. ಇದೊಂದು ಸಮಾಧಿ. ಆದಿಲಶಾಹಿ ತನಗಾಗಿ, ತನ್ನ ಪರಿವಾರದವರಿಗಾಗಿ ಅವನು ಜೀವಂತವಿದ್ದಾಗಲೇ ಕಟ್ಟಿದ ಗೋರಿಸ್ಥಳ. ವಾಸ್ತು ಶಿಲ್ಪಿಗಳಾದ ಯಾಕೂತ ಮತ್ತು ದಬೂಲ ರವರು ನಿರ್ಮಿಸಿದ್ದಾರೆ. ಇದರ ಉದ್ದ ಹಾಗೂ ಅಗಲ 50ಮೀಟರ್ ಹೊರಗಡೆ 198ಅಡಿ ಮತ್ತು ಒಳಗಡೆ 175 ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ 39ಮೀ ವ್ಯಾಸ ಹೊಂದಿದೆ. ಎಂಟು ಅಂತಸ್ತುಗಳಿವೆ. ಇಲ್ಲಿರುವ ಪಿಸುಗುಟ್ಟುವ ಶಾಲೆ ಯಲ್ಲಿ ಅತಿ ಸಣ್ಣ ಶಬ್ದವೂ 37 ಮಿ. ದೂರದಲ್ಲಿಯೂ ಸ್ಪಷ್ಟವಾಗಿ ಕೇಳಿಸುತ್ತದೆ.
ಗುಂಬಜದ ಕೆಳಗಿರುವ ವಿಶಾಲ್ ಹಾಲಿನ ವಿಸ್ತೀರ್ಣ 1833767ಚದರಡಿಗಳು.

ಇಲ್ಲಿರುವ ಗೋಡೆಗಳಲ್ಲಿ ಪ್ರತಿಯೊಂದರಲ್ಲಿಯೂ ಮೂರು ಕಮಾನುಗಳನ್ನು ರಚಿಸಲಾಗಿದೆ. ಗುಮ್ಮಟವು ನಿಂತಿರುವದು ಪೆ oಡಾoಟಿವ ಎಂಬ ತತ್ವದ ಮೇಲೆ. ಪರಸ್ಪರ ಕ್ರಾಸ್ ಆಗುವ ಕಮಾನುಗಳ ವ್ಯವಸ್ಥೆ ಡೊಮಿಗೆ ಆಧಾರವಾಗಿದೆ. ಜಾಲರಿ ಕಿಟಕಿ ಗಳಿoದ ಗಾಳಿ. ಬೆಳಕಿನ ವ್ಯವಸ್ಥೆಯಿದೆ. ನಾಲ್ಕೂಮಿನಾರ್ ಹತ್ತಿ ಮೇಲೆ ಹೋಗಲು ಮೆಟ್ಟಲುಗಳಿವೆ ಆದರೆ ಈಗ ಸಧ್ಯ ಎರಡು ಮಿನಾರ್ ತೆಗೆದಿರುತ್ತಾರೆ ಒಂದು ಮೇಲೆ ಹತ್ತಲು ಹಾಗೂ ಒಂದು ಕೆಳಗೆ ಇಳಿಯಲು ವ್ಯವಸ್ಥೆ ಇದೆ.
ಮೇಲೆ ಹತ್ತಿ ಹೋದಾಗ ಸುಮಾರು ಮೂರುಕಾಲು ಅಡಿ ಅಗಲದ ಗ್ಯಾಲರಿ ಇದೆ. ಇದನ್ನ ಪಿಸುಗುಟ್ಟುವ ಗ್ಯಾಲರಿ (whispering gallery) ಎಂದು ಕರೆಯುತ್ತಾರೆ. ಇಲ್ಲಿ ಅತ್ಯಂತ ಮೇಲುಧ್ವನಿಯಲ್ಲಿ ಆಡಿದ ಮಾತು ಕೂಡ ಗ್ಯಾಲರಿಯ ಮತ್ತೊಂದು ತುದಿಯಲ್ಲಿ ಕೇಳಬಹುದು. ಕುಳಿತುಕೊಳ್ಳಲು ನಾಲ್ಕೂ ಕಡೆ ವ್ಯವಸ್ಥೆ ಮಾಡಿದ್ದಾರೆ. ಕುಳಿತು ಗೋಡೆಗೆ ಪಿಸುಗುಟ್ಟುತ್ತಿದ್ರೆ ಇನ್ನೊಂದು ಗೋಡೆಗೆ ಕಿವಿಯಾನಿಸಿ ಕೇಳಬಹುದು.
ಒಂದು ಬಾರಿ ಗಟ್ಟಿಯಾಗಿ ಚಪ್ಪಾಳೆ ತಟ್ಟಿದರೆ ಅದು 10ಸಲ ಪ್ರತಿಧ್ವನಿಸುತ್ತದೆ.ಇಲ್ಲಿ ಗುಟ್ಟುನಲ್ಲಿ ಹೇಳಿದ ಮಾತು ರಟ್ಟಾಗುತ್ತದೆ. ಹೆಸರಿಟ್ಟು ಕರೆದರೆ 10ಬಾರಿ ಪ್ರತಿಧ್ವನಿ ಸುತ್ತದೆ. ಬೆಳಿಗ್ಗೆ ಬೇಗ ನೋಡಲು ಹೋದ್ರೆ ಆಗ ಗದ್ದಲು ಕಮ್ಮಿ. ಆಗ ಈ ಅದ್ಭುತ ಅನುಭವಿಸಬಹುದು.
ಗುಂಬಜಿನ ಗೋಡೆಗಳ ಹೊರಗೆ ಪಾರಿವಾಳ. ಆನೆ. ಕಮಲದಳಗಳ ಮತ್ತು ಕಂಠ ಹಾರಗಳ ಸುಂದರವಾದ ಕೆತ್ತನೆ ಹಾಗೂ ಶಿಲ್ಪಗಳನ್ನು ನೋಡಬಹುದು. ಹಾಲಿನ ಮಧ್ಯ ಭಾಗದಲ್ಲಿ ಆದಿಲ ಷಾ ಹಾಗೂ ಅವನ ಬಂಧುಗಳ ಕೃತಕ ಸಮಾಧಿಗಳಿವೆ. ನಿಜವಾದ ಸಮಾಧಿ ನೆಲಮಾಳಿಗೆಯಲ್ಲಿದೆ.
ಮಿನಾರ್ ನಿಂದ ಮೇಲೆ ತಲುಪಲು 108ಮೆಟ್ಟಿಲುಗಳನ್ನು ಹತ್ತಬೇಕು.
ಸುಮಾರು 65 ಹೆಕ್ಟರ್ ಪ್ರದೇಶ ಗುಮ್ಮಟವನ್ನು ಸುತ್ತುವರೆದಿದೆ. ಸುತ್ತಲೂ ಸುಂದರ ಉದ್ಯಾನವನವಿದೆ. ಇದು ಅರಕ್ಯಾಲಜಿಕಲ್ ಸರ್ವೇಆ ಫ್ ಇಂಡಿಯಾ ಸುಪರ್ದಿ ಯಲ್ಲಿದೆ.ಒಮ್ಮೆ ಎಲ್ಲರೂ ಸಂದರ್ಶಸಲೇಬೇಕಾದ ಅದ್ಭುತ ಕಟ್ಟಡ.

✍️ಶ್ರೀಮತಿ ವಿದ್ಯಾ.ಲಕ್ಷ್ಮೀಶ. ಹುಂಡೇಕರ.

Don`t copy text!