ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ

ಹುಡುಕುತ್ತಿದ್ದೇನೆ ನಾನು
ಗುಡಿ ಚರ್ಚು ಮಸೀದಿ
ಗುರುದ್ವಾರ ಬಸದಿ ಮಠ
ಬೌದ್ಧ ವಿಹಾರಗಳಲ್ಲಿ

ಕಾಣಲಾರೇನು ದೇವರ
ಧರ್ಮ ತತ್ವ ಚಿಂತನೆ
ಎಲ್ಲೆಡೆ ಪೂಜೆ ಪ್ರಾರ್ಥನೆ
ಮರೆತು ಮನುಜ ಪಥ

ಬೈಬಲ್ ಕುರಾನ್ ಗೀತೆ
ವಚನ ಪಠಣ ನಿಂತಿಲ್ಲ
ಗಟ್ಟಿ ಧ್ವನಿಯ ಕೂಗು
ಶಬ್ದಗಳ ಲಜ್ಜೆ ಕರ್ಕಶ

ಹಸಿವು ಬಡತನ ಧರ್ಮ
ಸುಲಿಗೆ ಶೋಷಣೆ ಕರ್ಮ
ಉಳ್ಳವರಿಗೆ ದೇವರು ಪೂಜೆ
ಇಲ್ಲದವರಿಗೆ ಇದೆ ಭಿಕ್ಷೆ

ಹುಡುಕುತ್ತಿದ್ದೇನೆ
ನಿತ್ಯ ನಿರಂತರ ಶೋಧ
ನೆರಳು ಬಿಸಿಲು ತಾಪ
ಎಂದು ಕೊನೆ ಮನುಜ ಶಾಪ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!