ಸಂತ ಶ್ರೇಷ್ಠ ಶ್ರೀ ಕನಕದಾಸರ ಮೂರ್ತಿ ಲೋಕಾರ್ಪಣೆ ನೇರವೇರಿಸಿದ ಸಿದ್ದಲಿಂಗಸ್ವಾಮಿ ನವಲಿಹಿರೇಮಠ
e-ಸುದ್ದಿ ವರದಿ;ಇಳಕಲ್
ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶ್ರೀ ಎಸ್ ಆರ್ ನವಲಿಹಿರೇಮಠರ ಅಭಿಮಾನಿ ಬಳಗ ಬೂದಿಹಾಳ ಎಸ್ ಕೆ ಇವರ ವತಿಯಿಂದ ಸಂತ ಶ್ರೇಷ್ಠ ಶ್ರೀ ಕನಕದಾಸರ ಮೂರ್ತಿ ಲೋಕಾರ್ಪಣೆ ಮಾಡಿ, ಕಾರ್ಯಕ್ರಮವನ್ನು ಎಸ್ ಆರ್ ಎನ್ ಅಭಿಮಾನಿ ಬಳಗದ ಯುವ ನಾಯಕರಾದ ಸಿದ್ದಲಿಂಗಯ್ಯಸ್ವಾಮಿ ನವಲಿ ಹಿರೇಮಠ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಬೂದಿಹಾಳ ಗ್ರಾಮದ ಕನಕದಾಸರ ವೃತ್ತಕ್ಕೆ ಹಾಗೂ ಬಾಬು ಜಗಜೀವನರಾಮ ಅವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ, ಕುಂಭಮೇಳದಲ್ಲಿ ಭಾಗವಹಿಸಿದರು.
ಶ್ರೀ ಸಹದೇವಯ್ಯ ಹುಚ್ಚಯ್ಯ ಗುರುವಿನ, ಸರೂರು ಇವರು ವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರಾದ ಭೀಮಣ್ಣ ಶಿರೂರ, ಶಾಂತಯ್ಯ ಮಠ, ಬಸವರಾಜ ತಾಳಿಕೋಟೆ, ಪ್ರಭು ವಿಟ್ಲಾಪುರ, ಮಲ್ಲಣ್ಣ ಕಮರಿ, ಸೋಮಶೇಖರ್ ಸರನಾಡಗೌಡರ, ನಾಗರಾಜ ಶಡ್ಲಗೇರಿ, ಶಿವಾನಂದ ಸಾರಂಗಮಠ, ಪ್ರಶಾಂತ ಪಲ್ಲೇದ, ಸಂತೋಷ ರಾಠೋಡ, ರವಿ ಬಾನಿ, ಬಸವರಾಜ ವಾಲಿಕಾರ ಹಾಗೂ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಗ್ರಾಮದ ಗುರು-ಹಿರಿಯರು, ಯುವಕರು, ತಾಯಂದಿರು, ಎಸ್ ಆರ್ ಎನ್ ಅಭಿಮಾನಿ ಬಳಗದ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.
ವರದಿಗಾರರು; ಶರಣಗೌಡ ಕಂದಕೂರ