ವಿವಿಧಕಡೆ ಭೂಮಿಪೂಜೆ ನೇರವೇರಿಸಿದ ಶಾಸಕ ದೊಡ್ಡನಗೌಡ ಜಿ ಪಾಟೀಲ್..

e-ಸುದ್ದಿ ವರದಿ:ಇಳಕಲ್

ಇಳಕಲ್ ನಗರದ ವಿವಿಧೆಡೆ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಭೂಮಿಪೂಜೆ ನೇರವೇರಿಸಿದರು.

ಪೌರಾಡಾಳಿತ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ ಹಾಗೂ ಇಳಕಲ್ ನಗರಸಭೆ ಕಾರ್ಯಾಲಯ ಇಳಕಲ್ ಸನ್ 2022-2023ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ-4 ಅಡಿಯಲ್ಲಿ ಇಳಕಲ್ ನಗರದ ವಿವಿಧ ವಾರ್ಡುಗಳಲ್ಲಿ ಮೂಲಭೂತ ಸೌಕರ್ಯಗಳಾದ ಸಿ ಸಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರು ನೆರವೇರಿಸಿದರು.

ಇ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷರು,ಸದಸ್ಯರು ಹಾಗೂ ಭಾಜಪ ಮುಖಂಡರು, ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!