ಲಿಂಗಸುಗೂರು ತಾಲ್ಲೂಕಿನ ವಿವಿದೆಡೆ ಆಲಿಕಲ್ಲು ಮಳೆ
e ಸುದ್ದಿ ಲಿಂಗಸುಗೂರು
ವರದಿ ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಹೋಬಳಿ ವ್ಯಾಪ್ತಿಯ ಕೋಠಾ, ಗೌಡೂರು,ಮಾಚನೂರು, ಯಲಗಟ್ಟಾ, ತವಗ, ಕಡ್ಡೋಣಿ, ಮಲ್ಲಾಪುರ,ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಶನಿವಾರ ಮಧ್ಯಾಹ್ನದ ವೇಳೆಯಲ್ಲಿ
ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿ ಕಲ್ಲು ಮಳೆ ಧಾರಾಕಾರವಾಗಿ ಸುರಿದಿದೆ. ಮಕ್ಕಳು, ಯುವಕರು ಸೇರಿದಂತೆ ಬಹುತೇಕರು ಆಲಿಕಲ್ಲು ಕೈ ಯಲ್ಲಿ ಹಿಡಿದು ಸಂತಸಪಟ್ಟರು.
ಅಲ್ಲದೇ ರಭಸವಾಗಿ ಜೋರಾದ ಗಾಳಿಯು ಬಿಸಿದ್ದರಿಂದ ಅಲ್ಲಲ್ಲಿ ಗಿಡಗಳು ,ರಂಭೆ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಸರಬರಾಜು ಕೆಲ ಕಾಲ ಸ್ಥಗಿತಗೊಂಡಿತ್ತು.
ಗೌಡೂರು ಬಸ್ ನಿಲ್ದಾಣದ ಹತ್ತಿರ ಟಿ ಪಾಯಿಂಟ್ ಮುಂದೆ ನಿಲ್ಲಿಸಿದ್ದ ಬೈಕಗಳ ಮೇಲೆ ಗಾಳಿಯ ಜೋರಾದ ರಭಸಕ್ಕೆ ಟಿ ಅಂಗಡಿ ಬಿದ್ದು ದ್ವಿಚಕ್ರ ವಾಹನ ಜಖಂಗೊಂಡಿದೆ.
ತೋಟಗಾರಿಕಾ ಬೆಳೆಗಳಾದ ಈರುಳ್ಳಿ,ಟೊಮೋಟೊ, ಮೆಣಸಿನ ಕಾಯಿ,ಶೆಂಗಾ, ಸೇರಿದಂತೆ ಆಣೆಕಲ್ಲನಿ ಹೊಡೆತಕ್ಕೆ ಮಾವಿನ ಹಣ್ಣಿನ ಫಸಲು ನೆಲ ಕಚ್ಚಿ ಅಪಾರ ಹಾನಿಯಾಗಿದ್ದು ಕೈ ಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಸರ್ಕಾರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.