ಇಳಕಲ್ ನಗರಕ್ಕೆ  ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆ ಪೂರ್ವತಯಾರಿ ವಿಕ್ಷಿಸಿದ ಜಿಲ್ಲಾಧಿಕಾರಿ ಹಾಗೂ ಶಾಸಕ ದೊಡ್ಡನಗೌಡ ಜಿ ಪಾಟೀಲ್.

ಇಳಕಲ್ ನಗರಕ್ಕೆ  ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆ ಪೂರ್ವತಯಾರಿ ವಿಕ್ಷಿಸಿದ ಜಿಲ್ಲಾಧಿಕಾರಿ ಹಾಗೂ ಶಾಸಕ ದೊಡ್ಡನಗೌಡ ಜಿ ಪಾಟೀಲ್.

e-ಸುದ್ದಿ ಇಳಕಲ್

ನಗರದ ಆರ್ ವೀರಮಣಿ ಕ್ರೀಡಾಂಗಣದಲ್ಲಿ 100 ಗ್ರಾಮಗಳಿಗೆ ಸಂಪೂರ್ಣ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾಲೂಕಿನ 20 ಕ್ಕೂ ಹೆಚ್ಚು ಕೆರೆಗಳ ನೀರು ತುಂಬುವ ಯೋಜನೆ, ಸರ್ಕಾರಿ ಕಟ್ಟಡಗಳು ರಸ್ತೆ ಅಭಿವೃದ್ಧಿಗಳ ಸುಮಾರು 700 ಕೋಟಿ ರೂಪಾಯಿಗಳ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯದ ಮುಖ್ಯಮಂತ್ರಿಗಳು ಆಗಮಿಸುವ ಹಿನ್ನಲೆಯಲ್ಲಿ ನಗರದ ಆರ್ ವೀರಮಣಿ ಕ್ರೀಡಾಂಗಣದ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳಾದ ಪಿ ಸುನೀಲ್ ಕುಮಾರ ಹಾಗೂ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಹುನಗುಂದ ಡಿವೈಎಸ್ ಪಿ ಗಿರೀಶ್ ಪಾಟೀಲ್,
ಹುನಗುಂದ್ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ಬಂಡೆಗುಂಬಳ, ಗ್ರಾಮೀಣ ಪಿ ಎಸ್ ಐ ಎಸ್ ಬಿ ಪಾಟೀಲ್ ಹಾಗೂ ಹುನಗುಂದ ಇಳಕಲ್ ತಾಲೂಕಿನ ವಿವಿಧ ಇಲಾಖೆಯ
ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!