ಇಳಕಲ್ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿದ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ..
e-ಸುದ್ದಿ ಇಳಕಲ್
ಇಳಕಲ್ ನಗರದ ಆರ್ ವೀರಮಣಿ ಕ್ರೀಡಾಂಗಣದಲ್ಲಿ 100 ಗ್ರಾಮಗಳಿಗೆ ಸಂಪೂರ್ಣ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾಲೂಕಿನ 20 ಕ್ಕೂ ಹೆಚ್ಚು ಕೆರೆಗಳ ನೀರು ತುಂಬುವ ಯೋಜನೆ, ಸರ್ಕಾರಿ ಕಟ್ಟಡಗಳು ರಸ್ತೆ ಅಭಿವೃದ್ಧಿಗಳ ಸುಮಾರು 700 ಕೋಟಿ ರೂಪಾಯಿಗಳ ಕಾಮಗಾರಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಚಾಲನೇ ನೀಡಿದರು.
ಅಲ್ಲದೇ ವಿವಿಧ ಪಲಾನುಭವಿಗಳಿಗೆ ವಿತರಿಸಿದರು. ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ದೊಡ್ಡನಗೌಡ ಜಿ
ಪಾಟೀಲ ಹಾಗು ಸಚಿವರುಗಳು,ಜಿಲ್ಲೆಯ ಶಾಸಕರು ಮತ್ತು ಪಲಾನುಭವಿಗಳು ಮತ್ತು ಹುನಗುಂದ ಮತಕ್ಷೇತ್ರದ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿಗಾರರು: ಶರಣಗೌಡ ಕಂದಕೂರ