ಟ್ಯಾಗೋರ್ ಬೇಂದ್ರೆ ಇಲಿಯಟ್ ಈಟ್ಸ್…

 

 

ವಿಶ್ವ ಕವಿಗಳ ದಿನದಂದು ಶಬ್ದಗಳ ಎಲ್ಲ
ಗಾರುಡಿಗರ ನೆನೆಸುವ ವಂದಿಸುವ,
ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದ ಎಲ್ಲಾ ಕವಿವರ್ಯರ ಮೋಡಿ, ಅಗಾಧ ಅಚೇತನ ಅನಿಕೇತನ,
ಮಹಾನ್ ಕವಿ ಟ್ಯಾಗೋರ್ನಿಂದ ಜಗತ್ಪ್ರಸಿದ್ಧ ಬೇಂದ್ರೆಯವರೆಗೆ,
ಇಂಗ್ಲಿಷಿನ ಕೀಟ್ಸ್ ನಿಂದ ಜಗತ್ ವಂದಿತ ಈಟ್ಸ್ ವರಗೆ, ಎಲ್ಲ ಕವಿಗಳ ಕಾವ್ಯಧಾರೆ ರಿಂಗಣಿಸುತ್ತಿದೆ ಇಂದಿನವರೆಗೂ….

ಪ್ರಶಾಂತ ಸರೋವರದ ಅಲೆಗಳಂತ ಕಾವ್ಯಧಾರೆಯ ಕುವೆಂಪು,
ದೂರದಲ್ಲೆಲ್ಲೋ ವರ್ಡ್ಸ್ವರ್ತ ನಿಸರ್ಗ ಕವಿಯ ಡೆಫದಿಲ್ಗಳ ಕುಣಿತ ಮತ್ತು ತೊನೆತ,
ಕಂಬಾರರ ಕಾವ್ಯದಲ್ಲಿ ನಿಸರ್ಗದ ಜೀವಂತಿಕೆ,
ಆಡಿನ್ನರ ಕಾವ್ಯದಲ್ಲಿನ ಜೀವದ ಅಣಕು ನಮ್ಮ ಬಾಳಿನ ಬೆಳಕಿನ ತುಣುಕು..

ಶಿವರಾಮ ಕಾರಂತರ ವೈಜ್ಞಾನಿಕ ಕವನಗಳು,
ಪಿಬಿ ಶಲ್ಲಿಯ ಓಜಮೆಂಡಿಯಾಸ್,
ಗೋಪಾಲಕೃಷ್ಣ ಅಡಿಗರಿಂದ ಬ್ರೌನಿಂಗರ ಮೈ ಲಾಸ್ಟ ಡಚೆಸ್ ವರೆಗೆ,
ಎಲ್ಲಾ ಪದಪುಂಜಗಳು ಭಾವವಿಲಾಸಗಳು ನಮ್ಮ ಮನದಾಳದಲ್ಲಿ ನಿತ್ಯ ನಿರಂತರ ವಿನೂತನ..

ಸರೋಜಿನಿ ನಾಯ್ಡು ಅವರಿಂದ ಸಲ್ವಿಯ ಪ್ಲಾತ ವೈವಿಧ್ಯ ಕಾವ್ಯಧಾರೆಯಲಿ ಮಿಂದೆದ್ದ ನಾವು,
ಅವರ ಕಾವ್ಯತ್ವ ಮತ್ತು ಗಂಭೀರತೆಗೆ ಮಂತ್ರಮುಗ್ಧ ಓದುಗರಾಗಿ ಅನುಭವದ ಕೊಳದಲ್ಲಿ ಮಿಂದೆದ್ದು,
ಕುವೆಂಪು ಮತ್ತು ಕೀಟ್ಸ್ ಅವರ ವಿನೂತನ ಶೈಲಿ ಮತ್ತು ಕಾವ್ಯ ಧ್ವನಿಗೆ ಬೆರಗಾದವರು ಅನುಕರಣಿಕರಾದವರು..

ಎಲ್ಲ ಜಗತ್ತಿನ ಕವಿಗಳ ವಂದಿಸೋಣ ಅಭಿನಂದಿಸೋಣ
ಅವರ ಸಾಹಿತ್ಯ ಓದಿಸಿ, ಓದಿ ವಿಮರ್ಶಿಸಿ ಹೊಸ ಲಾಲಿತ್ಯವ ಪಡೆಯೋಣ ಜ್ಞಾನಗಂಗೆ ಹರಿಸೋಣ,
ಎಲ್ಲ ಶಬ್ದ ಗಾರುಡಿಗರ ಜ್ಞಾನ ಪರಂಪರೆ ಕಾವ್ಯತ್ವ ಜೀವನದ ಪ್ರತಿಬಿಂಬ ಸಮಾಜದ ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧ….

ಪ್ರೊ ವಿಜಯಲಕ್ಷ್ಮಿ ಪುಟ್ಟಿ ತಿರ್ಲಾಪೂರ
ಬೆಳಗಾವಿ

Don`t copy text!