ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಡಿ.ಎಸ್.ಹೂಲಗೇರಿ
e-ಸುದ್ದಿ ಲಿಂಗಸುಗೂರು
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಡಕಲ್ ಹತ್ತಿರ ತಾಯಿ – ಮಕ್ಕಳ ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿಯ ಶಂಕು ಸ್ಥಾಪನೆಯನ್ನು ಶಾಸಕ ಡಿಎಸ್ ಹೂಲಿಗೇರೆ ಅವರು ಭೂಮಿ ಪೂಜೆ ಮಾಡುವ ಮೂಲಕ ನೆರವೇರಿಸಿದರು.
2022-23 ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 30 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ನೂರು ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆಯ ಜಿಲ್ಲೆಯಲ್ಲಿ ಇದೆ ಮೊದಲನೆಯದಾಗಿ ಈ ಆಸ್ಪತ್ರೆಯಿಂದ ತಾಲೂಕಿನ ಮತ್ತು ನೆರೆಹೊರೆಯ ತಾಲೂಕು ಮತ್ತು ಜಿಲ್ಲೆಗಳ ತಾಯಿ ಮತ್ತು ಮಕ್ಕಳಿಗೆ ಆರೋಗ್ಯಕರವಾಗಿ ಅನುಕೂಲವಾಗಲಿದೆ.
ತಾಲೂಕಿಗೆ ಇನ್ನೂ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಂಜೂರಾಗಿದ್ದು ಸ್ಥಳ ಗುರುತಿಸುವ ಕೆಲಸ ನಡೆದದ್ದು ಶೀಘ್ರ ಅವುಗಳಿಗೂ ಭೂಮಿ ಪೂಜೆ ನೆರವೇರಿಸಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಡಕಲ್ ಹತ್ತಿರದಲ್ಲಿ 2021- 22ನೇ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಂದಾಜು 10 ಕೋಟಿ ರೂ ಮೊತ್ತದ ಅಲ್ಪಸಂಖ್ಯಾತ ಮುರಾರ್ಜಿ ವಸತಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಾನು ಮಾಡಿರುವ ಕಾರ್ಯಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳುತ್ತೇನೆ. ನನ್ನ ಬಗ್ಗೆ ವಿರೋಧಿಗಳು ಇಲ್ಲದೆ ಅಪಪ್ರಚಾರ ಮಾಡಿದರು ಕೂಡ ಮತದಾರರಿಗೆ ಯಾರು ಏನು ಎಂಬುದು ಗೊತ್ತಿದೆ. ಮುಂದಿನ ದಿನಗಳಲ್ಲಿ ಗೌಡೂರು ರಸ್ತೆ, ವೀರಾಪುರ್ ಕ್ರಾಸ್ ಅನ್ವರಿ ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಕಡಲ್,ಮುಖಂಡರಾದ ಖಾದರ್ ಪಾಷಾ ,ಡಿ.ಜಿ ಗುರುಕಾರ್, ಗುಂಡಪ್ಪ ನಾಯಕ, ಎಂ.ಡಿ ರಫಿ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ರುದ್ರಗೌಡ ಪಾಟೀಲ್ ,ಟಿ ಎಚ್ ಒ ಅಮರೇಶ್ ಪಾಟೀಲ್ ಸೇರಿದಂತೆ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.