ಗೌಡೂರು ಸರ್ಕಾರಿ ಪ್ರೌಢಶಾಲೆಗೆ ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಭೇಟಿ
e-ಸುದ್ದಿ ಲಿಂಗಸುಗೂರು
ವರದಿ ವೀರೇಶ ಅಂಗಡಿ ಗೌಡೂರು
ಲಿಂಗಸುಗೂರು ತಾಲ್ಲೂಕಿನ ಗುರುಗುಂಟಾ ಸಮೀಪದ ಗೌಡೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ಅವರು ಭೇಟಿ ನೀಡಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಶಾಲೆಗೆ ನೀಡಿದ ಸ್ಮಾರ್ಟ್ ಕ್ಲಾಸ್ ವಿಕ್ಷಣೆ ಮಾಡಿ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು.
ನಂತರ ಹತ್ತನೆ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿರ್ಧಿಷ್ಟ ಗುರಿಯನ್ನು ಇಟ್ಟುಕೊಂಡು ಓದಲು ಮುಂದಾಗಿ.ಸ್ಪರ್ಧಾತ್ಮಕ ಯುಗದಲ್ಲಿ ಓದಿಗೆ ತುಂಬಾ ಮಹತ್ವವಿದ್ದು ಪರೀಕ್ಷಾ ಸಮಯ ಇರುವದರಿಂದ ವಿದ್ಯಾರ್ಥಿಗಳು ಕಾಲ ಹರಣ ಮಾಡದೇ ಮೊಬೈಲ್ ಬಿಟ್ಟು ಪುಸ್ತಕದ ಕಡೆಗೆ ಗಮನಹರಿಸಿ ಸಂಬಂದಿಸಿದ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು.
ಸರ್ಕಾರಿ ನೌಕರಿ ಪಡೆಯುವುದು ಸುಲಭವಾದ ಕೇಲಸವಲ್ಲ.ಸ್ಪರ್ಧಾ ಜಗತ್ತಿನಲ್ಲಿ ಶ್ರದ್ಧೆಯಿಂದ ಸಮಯ ಪಾಲನೆ ಮಾಡುತ್ತಾ ಓದಿದಾಗ ಭವಿಷ್ಯದಲ್ಲಿ ನಿಶ್ಚಿತ ಯಶಸ್ಸು ಕಾಣಲು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಎಂ.ಎಸ್.ತಮ್ಮಣ್ಣನವರ್, ಸಹ ಶಿಕ್ಷಕರಾದ ನಿಂಗಪ್ಪ ಆದಪ್ಪ , ಚಿದಾನಂದ,ಪಕೀರಣ್ಣ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.