ಮತ್ತೆ ಬಂದ ವಸಂತ
ಸದ್ದು ಗದ್ದಲ ಸಂತೆಯೊಳಗಿನ ಬದುಕಿಗೆ ಯಾವ ವಸಂತ ಬಂದರೇನು? ದೊರೆ
ನಿತ್ಯ ಓಡುವ ಕಾಲಚಕ್ರ ಕ್ಕೆ ಗೆಜ್ಜೆ ಕುಣಿಸುತ್ತ ಕುಳಿತರೆ ಓಡುವುದನ್ನು ಬಿಡುವುದೇ? ದೊರೆ
ಹರುಷದಿಂ ಕೂಡಿ ನಲಿದು ಹಗಲೆನ್ನದೇ ಇರುಳೆನ್ನದೇ ದುಡಿಯುವ ದೇಹಕ್ಕೆ ಮತ್ತಾವ
ವಸಂತ ?ದೊರೆ
ದೊಡ್ಡವರ ದೊಡ್ಡಸ್ತಿಕೆ ಡೊಳ್ಳು ಹೊಟ್ಟೆಯ ಆಡಂಬರ ಬಡವರ ಹೊಟ್ಟೆಯನ್ನು ತನಿಸುವುದೇ? ದೊರೆ
ಬಾಗಿಲು ತುಂಬ ರಂಗೋಲಿ ತಳಿರು ತೋರಣ ಸಿಹಿ ಗಡುಬು ಹೂರಣ
ಮನದ ಕಾಮನೆಯ ಹುನ್ನಾರು
ಬಿಡುವುದೇ? ದೊರೆ
ಬಿಂಕು ಬಿಗುಮಾನದ ಮೆತ್ತನೆಯ ಹಾಸಿಗೆಯಲ್ಲಿ ನಗುವ ಹೂ
ಬಡವರ ಸೋಗೆಯಲಿ ಅರಳಿ ನಿಲ್ಲುವುದೇ? ದೊರೆ
ಮತ್ತದೇ ದಿನ ಮತ್ತದೇ ಕಾಯಕ
ಕಾಯ ಹಣ್ಣಾಗಿ ಉದರಿ ಹೋಗುವುದನ್ನು ತಡೆಯಲಾದಿತೇ? ದೊರೆ
ಬುದ್ಧ ಬಸವ ಅಂಬೇಡ್ಕರ
ತತ್ವ ಸಿದ್ಧಾಂತವನು ತಲೆ ಎತ್ತಿ ನಡೆದವರನು ಎತ್ತಿ ಹಿಡಿದವರನು
ಮತ್ತೆಲ್ಲಿ ಕಾಣಲಾದಿತು? ದೊರೆ
ಅಮ್ಮನ ಮಡಿಲಿನ ಮಕ್ಕಳಲ್ಲಿಯೇ ಒಕ್ಕಟ್ಟಿನ ಬಲವಿಲ್ಲದ ಜಗದಲ್ಲಿ ಮತ್ತಾವ ವಸಂತ ? ಮೂಡಿಬರುವುದು ದೊರೆ
–ಡಾ ಸಾವಿತ್ರಿ ಎಂ ಕಮಲಾಪೂರ