ಹಿರೇ ಓತಗೇರಿ ಗ್ರಾಮದಲ್ಲಿ ಕೆರಳಿದ ಅವಳಿ ಸರ್ಪಗಳು ನಾಟಕ ಉದ್ಘಾಟಿಸಿದ ;ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್….

ಹಿರೇ ಓತಗೇರಿ ಗ್ರಾಮದಲ್ಲಿ ಕೆರಳಿದ ಅವಳಿ ಸರ್ಪಗಳು ನಾಟಕ ಉದ್ಘಾಟಿಸಿದ ;ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್….

e-ಸುದ್ದಿ ವರದಿ:ಇಳಕಲ್

ಇಳಕಲ್ ತಾಲೂಕಿನ ಹಿರೇ ಓತಗೇರಿಯ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಮಾರುತೇಶ್ವರ ಕೊಂಡ ತುಳುಕುವ ನಿಮಿತ್ಯವಾಗಿ ಶ್ರೀವಿಜಯ ಮಹಾಂತೇಶ್ವರ ರಂಗಮಂದಿರದ ಬಯಲು ಜಾಗದಲ್ಲಿ ಕೆರಳಿದ ಅವಳಿ ಸರ್ಪಗಳು ಎಂಬ ನಾಟಕವನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಅಬ್ದುಲ್ ರಜಾಕ್ ತಟಗಾರ ಹಾಗೂ ಲಕ್ಷ್ಮಣ ರೇವಡಿ ಹಾಗೂ ಗ್ರಾಮದ ಯುವಮಿತ್ರರು ಉಪಸ್ಥಿತರಿದ್ದರು.

ಹಿರೇ ಓತಗೇರಿ ಗ್ರಾಮದ ಗುರುಹಿರಿಯರು ಯುವ ಮಿತ್ರರು ತಾಯಂದಿರು ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು ನಾಟಕ ನೋಡಲು ಆಗಮಿಸಿದ್ದರು.

ವರದಿಗಾರರು; ಶರಣಗೌಡ ಕಂದಕೂರ

Don`t copy text!