ಸಸಿಗಳನ್ನ ನೆಡುವ
ಮೂಲಕ  ವಿಶಿಷ್ಟವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ವಿಶ್ವ ಬಡಿಗೇರ್..

e-ಸುದ್ದಿ ವರದಿ:ಇಳಕಲ್
ಇಳಕಲ್ ನಗರದ ಸಾಮಾಜಿಕ ಕಳಕಳಿಯುಳ್ಳ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ಯುವ ಮಿತ್ರ ವಿಶ್ವ ಬಡಿಗೇರ್ ಅವರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳದೆ, ಇತರರಿಗೆ ಮಾದರಿಯಾಗುವಂತೆ ನಗರದ ಹಲವಾರು ಶಾಲೆಗಳಿಗೆ ಸಂಘ ಸಂಸ್ಥೆಗಳಿಗೆ ಸುಮಾರು 50 ಸಸಿಗಳನ್ನು ನೀಡುವ ಮೂಲಕ ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿಯನ್ನು ತೋರಿಸಿದ್ದಾರೆ.
ಇವರ ಪರಿಸರ ಪ್ರೇಮಕ್ಕೆ ಅವರ ಸಹಪಾಠಿಗಳು ಬೆಂಬಲವಾಗಿ ನಿಂತಿದ್ದರು.

ವರದಿಗಾರರು: ಶರಣಗೌಡ ಕಂದಕೂರ.

Don`t copy text!