ಬಾಲಕರ ವಸತಿ ನಿಲಯದಲ್ಲಿ ಸರಸ್ವತಿ ಪೂಜೆಯೊಂದಿಗೆ ಮಕ್ಕಳ ಬಿಳ್ಕೊಡುಗೆ ಸಮಾರಂಭ…
e-ಸುದ್ದಿ ವರದಿ:ಮುದೇನೂರ
ಮುದೇನೂರಿನ ಮೆಟ್ರಿಕ್ ಬಾಲಕರ ವಸತಿ ನಿಲಯದಲ್ಲಿ ಸರಸ್ವತಿ ಪೂಜೆ ಹಾಗೂ ಮಕ್ಕಳ ಬಿಳ್ಕೊಡುಗೆ ಸಮಾರಂಭ ನಡೆಯಿತು.
ಬೀಳ್ಕೊಡುವ ಸಮಾರಂಭದ ಜೊತೆಗೆ ವಿದ್ಯೆ ನೀಡುವ ವಿದ್ಯಾ ಮಾತೆ ಸರಸ್ವತಿಯ ಪೂಜೆಯನ್ನು ಭಕ್ತಿ ಪೂರ್ವಕವಾಗಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂಬ ಉದ್ದೇಶದಿಂದ ಪೂಜೆ ಮಾಡಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ನೆರವೇರಿಸಿದರು.
ಈ ಸಮಾರಂಭದಲ್ಲಿ ಮೇಲ್ವಿಚಾರಕರಾದ ಶ್ರೀಮತಿ ಸುಜಾತ ಅವರು ಮಾತನಾಡುತ್ತಾ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಪಡೆದು ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಸ್ತಗಿರಿಸಾಬ್ ಬಡಿಗೇರ್ ,ಚಂದ್ರಶೇಖರ ಕುಂಬಾರ, ಸುಜಾತ ಕುರಟ್ಟಿ, ನಾಗರಾಜ ಗಿಣಿಗೇರ, ಸೋಮನಾಥ, ಶ್ರೀಮತಿ ನಪಿಸಬೇಗಮ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿಗಾರರು: ಶರಣಗೌಡ ಕಂದಕೂರ