ಪ್ರಶಿಕ್ಷಣಾರ್ಥಿಗಳ ಒಕ್ಕೂಟ ಉದ್ಘಾಟನಾ ಸಮಾರಂಭ ಉದ್ಘಾಟಿಸಿದ ಪೂಜ್ಯ ಡಾ. ಗುರುಮಹಾಂತ ಸ್ವಾಮಿಗಳು..
e-ಸುದ್ದಿ ವರದಿ:ಇಳಕಲ್
ಇಲ್ಕಲ್ ನಗರದ ಪ್ರತಿಷ್ಠಿತ ಪ್ರಶಿಕ್ಷಣಾರ್ಥಿಗಳ ಶಿಕ್ಷಣ ಮಹಾವಿದ್ಯಾಲಯವಾದ ಎಸ್ ಆರ್ ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2022 23ನೇ ಶೈಕ್ಷಣಿಕ ವರ್ಷದ ಪ್ರೌಢ ಶಿಕ್ಷಣ ವೃತ್ತಿಗಳ ಒಕ್ಕೂಟ ಉದ್ಘಾಟನಾ ಸಮಾರಂಭ ಮಹಾಂತ ಗಂಗೋತ್ರಿ ಆವರಣದ ಎಸ್ ಆರ್ ಕಂಠಿ ಸಭಾಭವನದಲ್ಲಿ ನಡೆಯಿತು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದ ಡಾ.ಗುರುಮಹಾಂತ ಸ್ವಾಮಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೇರ್ಮನ್ನರಾದ ಎಂ ವಿ ಪಾಟಿಲ್, ಉದ್ಘಾಟಕರಾದ ದಯಾನಂದ ಯಾವಗಲ್, ಅತಿಥಿಗಳಾದ ಬಸವರಾಜ್ ಎಸ್ ಕೌಲಗಿ, ಮಹದೇವ್ ವಿ ಕಂಬಾಗಿ, ಸಿಪಿ ಸಾಲಿಮಠ,ಆರ್ ಎಸ್ ಹುಲಿ, ಜಿಎಂ ಬೋರಾ, ಅಶೋಕ್ ಬಿಜ್ಜಲ್, ಬಿ ವಿ ಮರಟದ, ಆರ್ , ಎಮ್ ಪಾಟೀಲ್, ಪ್ರಾಚಾರ್ಯರಾದ ರಾಖಿ ಜಿ ಪಟ್ನೇಕರ್, ಹಾಗೂ ಬೋಧಕ,ಬೋಧಕೆತರ ಸಿಬ್ಬಂದಿಗಳು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ವರದಿಗಾರರು; ಶರಣಗೌಡ ಕಂದಕೂರ