ಸರ್ಕಾರದ ನಡೆಯನ್ನು ಉಗ್ರವಾಗಿ ಖಂಡಿಸಿದ ಕರ್ನಾಟಕ ಮುಸ್ಲಿಂ ಯೂನಿಟಿ….

ಸರ್ಕಾರದ ನಡೆಯನ್ನು ಉಗ್ರವಾಗಿ ಖಂಡಿಸಿದ
ಕರ್ನಾಟಕ ಮುಸ್ಲಿಂ ಯೂನಿಟಿ….

 e-ಸುದ್ದಿ ವರದಿ;ಇಳಕಲ್

ಮುಸಲ್ಮಾನರು ಶೈಕ್ಷಣಿವಾಗಿ ಸಾಮಾಜೀಕವಾಗಿ ತೀರಾ ಹಿಂದುಳಿದಿರುವದಾಗಿ ಚಿನ್ನಪ್ಪರೆಡ್ಡಿ
ಆಯೋಗ ಸ್ಪಷ್ಟವರಿಸಿದ ನಂತರವ 4% ಮೀಸಲಾತಿಯನ್ನು ದೇವೇಗೌಡರರ ಸರ್ಕಾರ ನೀಡಿತ್ತು ಈ ಮೀಸಲಾತಿಯನ್ನು ಬಿಜೆಪಿಯ ಬಸವರಾಜ ಬೋಮ್ಮಾಯಿ ಸರ್ಕಾರ ಕಿತ್ತು ಕೊಂಡಿದ್ದು ಘೋರ ಅನ್ಯಾಯ ಮತ್ತು ಅಕ್ಷಮ್ಯ ಎಂದು ಕರ್ನಾಟಕ ಮುಸ್ಲಿಂ ಯೂನಿಟಿ ವತಿಯಿಂದ ಇಳಕಲ್ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಚಿನ್ನಪ್ಪರೆಡ್ಡಿ ಆಯೋಗದ ಮೂಲಕ ಬಂದ ಸಣ್ಣದೊಂದು ಸಾಮಾಜಿಕ ನ್ಯಾಯದ ಆಶಯಕ್ಕೆ ಬೊಮ್ಮಾಯಿ ಕೊಡಲಿ ಪೆಟ್ಟು ನೀಡಿ ಮುಸ್ಲಿಂರಿಗೆಅ  ನ್ಯಾಯ ಮಾಡಿದ್ದಾರೆ, ಎಂದಿರುವ ಕೆ.ಎಂ.ಯು ಜಾತಿ ಮೂಲದಿಂದ ತೀರ ಬಡತನದಲ್ಲಿರುವ ಮುಸಲ್ಮಾನರನ್ನು ವರ್ಗ ಮೂಲ ಬಡತನದಲ್ಲಿ ಸೇರಿಸಲು ಸರ್ಕಾರಕ್ಕೆ ಹೇಳಿದ್ದಾರೆಯೆ ಎಂದರು.

ಜಾತಿ ಮೂಲ ಬಡತನಕ್ಕೂ, ವರ್ಗ ಮೂಲ ಬಡತನಕ್ಕೂ ತುಂಬ ವ್ಯತ್ಯಾಸ ವಿದೆ. ಇದನ್ನು ಅರಿಯದೆ ಕೇವಲ ರಾಜಕಾರಣಕ್ಕಾಗಿ ಮುಸ್ಲಿಂರ ಮೀಸಲಾತಿ
ಮುನ್ನೆಲೆಗೆ ತಂದು ಮತಬ್ಯಾಂಕ ಸೃಷ್ಠಿಸುವ ಹುನ್ನಾರವಲ್ಲದೆ ಇದರಲ್ಲಿ ಬೇರೆನೂ ಇಲ್ಲ ಎಂದಿದೆ.
ಮುಸ್ಲಿಂರು ಧಾರ್ಮಿಕ ಪಂಗಡದಲ್ಲಿ ಸೇರಿದ್ದಾರೆ ಎನ್ನುವದಾದರೆ ಹಿಂದುಳಿದ ವರ್ಗದಲ್ಲಿ ಸೇರಿರುವ ಕ್ರೈಸ್ತರು, ಜೈನರು, ಫಾರಸಿಗರು, ಬೌದ್ಧರು, ಮತ್ತು ಧರ್ಮ ಪರಿವರ್ತನೆಯ ಮುಖಾಂತರ ಬೇರೆ-ಬೇರೆ ಧರ್ಮ ಸ್ವಿಕರಿಸಿರುವ ದಲಿತರನ್ನು ಏನು ಮಾಡುತ್ತಿರಿ ಎಂಬ ಪ್ರಶ್ನೆಗೆ ಬೊಮ್ಮಾಯಿರವರು ಉತ್ತರಿಸಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಜಾಕ್ ತಟಗಾರ, ಹಸನ್ ಗೋತಗಿ, ರಿಯಾಜ್ ಮುಲ್ಲಾ, ವಾಸಿಂ ಜಹಾಗೀರ್ದಾರ್, ನಜೀಮ್ ಅಹ್ಮದ್ ಹಾಗೂ ಇಳಕಲ್ ಯೂತ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!