ಕಾಡುವ ವೈದ್ಯರಲ್ಲ, ಕಾಪಾಡುವ ವೈದ್ಯರು ಡಾ.ಶಿವಶರಣಪ್ಪ ಇತ್ಲಿ

ಕಾಡುವ ವೈದ್ಯರಲ್ಲ, ಕಾಪಾಡುವ ವೈದ್ಯರು ಡಾ.ಶಿವಶರಣಪ್ಪ ಇತ್ಲಿ

 

e-ಸುದ್ದಿ ಮಸ್ಕಿ

ಡಾ.ಶಿವಶರಣಪ್ಪ ಇತ್ಲಿ ಒಬ್ಬ ವ್ಯಕ್ತಿ ಅಲ್ಲ.ಅವರೊಂದು ಶಕ್ತಿ. ಕೇವಲ ವೈದ್ಯರಲ್ಲ. ವೈದ್ಯರೂಪದ ಬಹುಮುಖ ವ್ಯಕ್ತಿತ್ವ ಅವರದು. ಅವರೊಳಗೊಬ್ಬ ಕ್ರೀಡಾಪಟು ಇದ್ದಾನೆ. ೭೭ ರ ಇಳಿಯದಲ್ಲೂ ಟೆನ್ನಿಸ್ ಆಟ ಅವರಿಗೆ ಬಲು ಪ್ರೀತಿ. ೪೦ ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶ ಮಸ್ಕಿಯಲ್ಲಿ ಟೆನ್ನಿಸ್ ಕೊರ್ಟ ಕಟ್ಟಿ ಹಲವರು ಟೆನ್ನಿಸ್ ಕ್ರೀಡಾಪಟುಗಳಾಗುವಂತೆ ಮಾಡಿದವರು ಇವರು. ಲಯನ್ಸ್ ಕ್ಲಬ್ ಸ್ಥಾಪಿಸಿ ಸ್ಥಾಪಕ ಅಧ್ಯಕ್ಷರಾಗಿ ೩೦ ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ
ಹಾಗೆಯೇ ಲಯನ್ಸ ಶಾಲೆ ತೆರೆದು ಅನೇಕ‌ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಓರ್ವ ಶಿಕ್ಷಣ ಪ್ರೇಮಿ, ಸ್ವತಹ ಅವರಲ್ಲಿ ಒಬ್ಬ ಶಿಕ್ಷಕ ಜಾಗೃತಿ ಯಲ್ಲಿದ್ದಾನೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ದುಡ್ಡು ಖರ್ಚು ಮಾಡದೆ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ತಿಳಿ ಹೇಳುವ ಪರಿ ವೈದ್ಯಲೋಕಕ್ಕೆ ಅಪರೂಪ.
ಕಳೆದ ೫೦ ವರ್ಷ ವೈದ್ಯಕೀಯ ಸೇವೆಯನ್ನು ಮಸ್ಕಿ ಸುತ್ತಮುತ್ತಲಿನ ೫೦ ಹಳ್ಳಿಗಳಿಗೆ ಎಡೆಬಿಡದೆ ಸೇವೆ ನೀಡಿದ್ದು ವೈದ್ಯೋ ನಾರಯಣ ಹರಿ ಎಂಬುದನ್ನು ಸಾಬೀತು‌ ಮಾಡಿದವರು.
ಪ್ರಾಮಾಣಿಕತೆ ಮತ್ತು‌ ಪಾರದರ್ಶಕತೆ ಎರಡು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ‌ ಮಾದರಿಯಾದವರು. ಸಹಕಾರ ಕ್ಷೇತ್ರಕ್ಕೆ ಹಲವರನ್ನು ತಮ್ಮ ಬಳಗಕ್ಕೆ ಸೇರಿಸಿಕೊಂಡು ಸಹಕಾರ ಕ್ಷೇತ್ರ ಸದೃಡವಾಗುವಂತೆ ಮಾಡಿದ ಕೀರ್ತಿ ಡಾ.ಶಿವಶರಣರ ಇತ್ಲಿ ಅವರಿಗೆ ಸಲ್ಲುತ್ತದೆ.
ಡಾ.ಶಿವಶರಣಪ್ಪ ಇತ್ಲಿ ಅವರಿಗೆ ೭೭ ರ ಇಳಿಯಲ್ಲಿ ಅವರ ಕುರಿತು ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರಿ ಸಂಘ ಅಭಿನಂದನ ಸಮಾರಂಭ ಹಾಗೂ ನಮ್ಮ ಡಾಕ್ಟರ್ ಎನ್ನುವ ಅಭಿನಂದನ ಗ್ರಂಥ ಲೋಕಾರ್ಪಣೆ ನಡೆಯಲಿದೆ. ಡಾ.ಶಿವಶರಣಪ್ಪ ಇತ್ಲಿ ಅವರು ನೂರು ವಸಂತಗಳನ್ನು ಕಂಡು ಧೀರ್ಘಾಯುಷಿಗಳಾಗಿ ಬಾಳುವಂತಾಗಲಿ

ವೀರೇಶ ಸೌದ್ರಿ ಮಸ್ಕಿ
ಸಂಪಾದಕ
e-ಸುದ್ದಿ ಪತ್ರಿಕೆ

Don`t copy text!