ನಮ್ಮ ಡಾಕ್ಟರ್’ ಗ್ರಂಥ ಬಿಡುಗಡೆ
ಮಸ್ಕಿ :ಡಾ.ಶಿವಶರಣಪ್ಪ ಇತ್ಲಿ ಆದರ್ಶ ಸಮಾಜದ ರುವಾರಿ-ಗುರುಮಹಾಂತ ಸ್ವಾಮೀಜಿ
e-ಸುದ್ದಿ ಮಸ್ಕಿ
ಮಸ್ಕಿ :ಶರೀರದ ಆರೋಗ್ಯ ಕಾಪಾಡುವ ಡಾ.ಶಿವಶರಣಪ್ಪ ಇತ್ಲಿ ವೃತ್ತಿಯ ಹೊರತಾಗಿಯು ಸಮಾಜದ ಸ್ವಾಸ್ಥ್ಯ ಕಾಪಡುವಲ್ಲಿ ಮುಂಚುಣಿಯಲ್ಲಿರುವದು ಅವರ ಹೆಗ್ಗಳಿಕೆ ಎಂದು ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣ್ಣದ ಶ್ರೀಭ್ರಮರಾಂಬ ದೇವಸ್ಥಾನದಲ್ಲಿ ಭಾನುವಾರ ನಡೆದ ಶ್ರೀ ಭ್ರಮರಾಂಬ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಹಾಗೂ ವೈದ್ಯ ಡಾ.ಶಿವಶರಣಪ್ಪ ಇತ್ಲಿ ಅವರ ಅಭಿನಂದನ ಸಮಾರಂಭ ಹಾಗೂ ನಮ್ಮ ಡಾಕ್ಟರ್ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಡಾಕ್ಟರ್ ಆಗಿದ್ದುಕೊಂಡು ಸಾಹಿತ್ಯ, ಸಂಗೀತ, ಕ್ರೀಡೆ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ಶಿವಶರಣಪ್ಪ ಇತ್ಲಿ ಅವರು ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ ಎಂದು ಖ್ಯಾತ ಸಂಗೀತಗಾರ ನಿವೃತ್ತ ಐಎಎಸ್ ಅಧಿಕಾರಿ ಡಾ. ಮುದ್ದುಮೋಹನ ಹೇಳಿದರು.
‘ ಜಿಲ್ಲಾ ಕೇಂದ್ರ ಬಿಟ್ಟು ಮಸ್ಕಿಯಂತ ಗ್ರಾಮದಲ್ಲಿ 50 ವರ್ಷಗಳ ಹಿಂದೆ ಬಂದು ವೈದ್ಯಕೀಯ ವೃತ್ತಿ ಆರಂಭಿಸಿದ ಇತ್ಲಿ ಅವರು ಈ ಭಾಗದಲ್ಲಿ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಕುಟುಂಬದ ಸದಸ್ಯರಾಗಿ ಚಿಕಿತ್ಸೆ ನೀಡುವ ಜೊತೆಗೆ ಸೂಕ್ತ ಮಾರ್ಗದರ್ಶನ ನೀಡುವ ಪರಿಪಾಠ ಇಂದಿಗೂ ರೂಢಿಸಿಕೊಂಡಿದ್ದಾರೆ.
ಲಯನ್ಸ್ ಕ್ಲಬ್, ಶಾಲೆ, ಸಹಕಾರಿ ಸಂಸ್ಥೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವುದು ವಿಶೇಷ ಎಂದರು.
ನಮ್ಮ ಡಾಕ್ಟರ್ ಗ್ರಂಥವನ್ನು ಡಾ. ಸಂಜೀವ ಕುಲಕರ್ಣಿ ಬಿಡುಗಡೆ ಮಾಡಿ ಭಾರತೀಯ ವೈದ್ಯಕೀಯ ಪರಂಪರೆ ಹಾಗೂ ಆಧುನಿಕ ವೈದ್ಯ ಪರಂಪರೆಯಲ್ಲಿ ಬಹಳಷ್ಟು ವ್ಯತ್ಯಾಸ ಗಳಿದ್ದು ಡಾ.ಶಿವಶರಣಪ್ಪ ಇತ್ಲಿ ಎರಡನ್ನು ಸಮನ್ವಯಗೊಳಿಸಿ ಜನಪ್ರಿಯ ವೈದ್ಯರಾಹಿದ್ದಾರೆ ಎಂದರು.
ಸಂತೆಕೆಲ್ಲೂರಿನ ಗುರುಬಸಬ ಸ್ವಾಮೀಜಿ, ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ತಿಮ್ಮಾಪೂರ ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಮುದಗಲ್, ಡಾ. ಶಿವಶರಣಪ್ಪ ಇತ್ಲಿ, ಪ್ರೋ. ಸಿದ್ದು ಯಾಪಲಪರ್ವಿ, ಡಾ. ವಸುಂಧರ ಭೂಪತಿ, ಡಾ. ಕರವೀರ ಪ್ರಭು ಕ್ಯಾಲಕುಂಡ, ಡಾ. ಬಸವಪ್ರಭು ಪಾಟೀಲ್, ಡಾ. ಕೆ. ಶಿವರಾಜ, ಡಾ. ಗುರುರಾಜ ದೇಶಪಾಂಡೆ, ಸಹಕಾರಿ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಹಿರೇಮಠ ಇತರರು ಇದ್ದರು.
ಮಹಾಂತೇಶ ಮಸ್ಕಿ, ವೀರೇಶ ಸೌದ್ರಿ ಮಾತನಾಡಿದರು. ಲಿಂಗರಡ್ಡಿ ಆಲೂರು ನಿರೂಪಿಸಿದರು.
ಸಹಕಾರಿ ಸಂಸ್ಥೆಯಿಂದ ಡಾ. ಶಿವಶರಣಪ್ಪ ಇತ್ಲಿ ಅವರನ್ನು ಸನ್ಮಾನಿಸಲಾಯಿತು.