ಸರ್ಕಾರದ ನಡೆಯನ್ನು ಉಗ್ರವಾಗಿ ಖಂಡಿಸಿದ ಉಸ್ಮಾನಗಣಿ ಹುಮ್ನಾಬಾದ್…

e-ಸುದ್ದಿ ಇಳಕಲ್

ಮುಖ್ಯಮಂತ್ರಿ ಶ್ರೀ ಬಸವರಾಜ ಬೋಮ್ಮಾಯಿ ಸರ್ಕಾರ ನಮ್ಮ ಮುಸ್ಲಿಂ ಸಮಾಜದ ಮಿಸಲಾತಿಯನ್ನು ಕಿತ್ತು ಕೊಂಡಿದ್ದು ಘೋರ ಅನ್ಯಾಯ ಮತ್ತು ಅಕ್ಷಮ್ಯ ಎಂದು ಅಂಜುಮಾನ್ ಕಮಿಟಿಯ ಅದ್ಯಕ್ಷರಾದ ಉಸ್ಮಾನಗಣಿ ಹುಮ್ನಾಬಾದ್ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಸಾಮಾಜಿಕ ನ್ಯಾಯದ ಆಶಯಕ್ಕೆ ಬೊಮ್ಮಾಯಿ ಕೊಡಲಿ ಪೆಟ್ಟು ನೀಡಿ ಮುಸ್ಲಿಂರಿಗೆ ಅನ್ಯಾಯ ಮಾಡಿದ್ದಾರೆ, ತೀರ ಬಡತನದಲ್ಲಿರುವ ಮುಸಲ್ಮಾನರ ಮೀಸಲಾತಿ ತೆಗೆದಿದ್ದು ಮುಸ್ಲಿಂ ಬಡಜನರನ್ನು ನೋವಿನ ಕುಪಕ್ಕೆ ತಳ್ಳಿದ್ದಿರಿ ಎಂದರು.

ಕೇವಲ ರಾಜಕಾರಣಕ್ಕಾಗಿ ಮುಸ್ಲಿಂರ ಮೀಸಲಾತಿ
ಮುನ್ನೆಲೆಗೆ ತಂದು ಮತಬ್ಯಾಂಕ ಸೃಷ್ಠಿಸುವ ಹುನ್ನಾರವಲ್ಲದೆ ಇದರಲ್ಲಿ ಬೇರೆನೂ ಇಲ್ಲ ಎಂದರು.
ಸಮಸ್ತ ಮುಸ್ಲಿಂ ಭಾಂಧವರು ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!