ಹುನಗುಂದ ಇಳಕಲ್ ತಾಲೂಕಾ
ಕೊರಮ ಸಮಾಜದ ವತಿಯಿಂದ ಸುದ್ದಿಗೋಷ್ಠಿ….
e-ಸುದ್ದಿ ವರದಿ:ಇಳಕಲ್
ಇಳಕಲ್; ಹುನಗುಂದ ಹಾಗೂ ಇಲಕಲ್ಲ ಜಂಟಿಯಾಗಿ ತಾಲೂಕಿನ ಹೋಟೆಲ್ ಕೀರಿಯಾಡ್ ನಲ್ಲಿ ರಾಜ್ಯ ಸರಕಾರದ ವಿರುದ್ದ ಕೊರಮ ಸಮಾಜದ ಮುಖಂಡರು ನ್ಯಾಯಮೂರ್ತಿ ಎ,ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಪಾರಸು ಮಾಡಿದ ರಾಜ್ಯ ಬಿಜೆಪಿ ಸರಕಾರದ ನಡೆಯ ವಿರುದ್ದ ಖಂಡನೆ ವ್ಯಕ್ತಪಡಿಸಿದರು.
ಇಲಕಲ್ಲ ತಾಲೂಕು ಅಧ್ಯಕ್ಷ ಸಂಗಪ್ಪ ಭಜಂತ್ರಿ ಅವರು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಅವರ ನಡೆಯನ್ನು ಕಟುವಾಗಿ ಟೀಕಿಸಿದರು, ಸುಮಾರು ೧೫ ವರ್ಷಗಳಿಂದ ಈ ವರದಿಯ ವಿರುದ್ದ ನೀರಂತರ ಹೋರಾಟ ಮಾಡುತ್ತಾ ಇದೊಂದು ಅವೈಜ್ಞಾನಿಕ ವರದಿ ಎಂದು ಹೇಳಿದರು ಸಹ ಸರಕಾರ ನಮ್ಮ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಟ್ಟಿಲ್ಲ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಜನಾಂಗ ತಕ್ಕ ಪಾಠ ಕಲಿಸಲಿದೆ ಎಂದರು.
ನಂತರ ಮಾತನಾಡಿದ ಹುನಗುಂದ ತಾಲೂಕಿನ ಅಧ್ಯಕ್ಷ ಸಂಗಪ್ಪ ಎಲ್ ಸಂಗಮದ ಮಾತನಾಡಿ ಆ ವರದಿಯನ್ನು ವಾಪಾಸ್ ತರಿಸಿ ಮರು ಸರ್ವೆಮಾಡಿ ನಮ್ಮ ಜನಾಂಗವನ್ನು ರಕ್ಷಿಸಬೇಕು ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಭಜಂತ್ರಿ, ಹಾಗೂ ಶೇಖಪ್ಪ ಭಜಂತ್ರಿ, ನಾಗಪ್ಪ ಭಜಂತ್ರಿ ದೇವೇಂದ್ರಪ್ಪ ಭಜಂತ್ರಿ, ರೋಮಣ್ಣ ಭಜಂತ್ರಿ ,ಗ್ಯಾನಪ್ಪ ಭಜಂತ್ರಿ, ಮಂಜುನಾಥ ಭಜಂತ್ರಿ, ಹನಮಪ್ಪ ಭಜಂತ್ರಿ, ಮುತ್ತಣ್ಣ ಭಜಂತ್ರಿ, ನಿಂಗಪ್ಪ ಭಜಂತ್ರಿ ,ಪರಸಪ್ಪ ಭಜಂತ್ರಿ ,ರಮೇಶ ಭಜಂತ್ರಿ, ಮಾರುತಿ ಭಜಂತ್ರಿ, ಸುಭಾಸ್ ಭಜಂತ್ರಿ ,ಮುದಿಯಪ್ಪ ಭಜಂತ್ರಿ, ಹುಲ್ಲಪ್ಪ ಭಜಂತ್ರಿ, ಯಮನೂರ ಭಜಂತ್ರಿ, ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತಿ ಇದ್ದರು. ಒಟ್ಟಿನಲ್ಲಿ ರಾಜ್ಯ ಸರಕಾರ ಮುಂದೆ ಅಧಿಕಾರಕ್ಕೆ ಬರಲ್ಲ ಇದು ನಮ್ಮ ಕೊರಮ ಜನಾಂಗಕ್ಕೆ ಅನ್ಯಾಯ ಮಾಡಿದೆ,ಹಿಗಾಗಿ ನಾಯಕರಿಗೆ ತಕ್ಕ ಪಾಠ ಕಲಿಸಬೇಕೆಂದು ಒಕ್ಕರುಲು ಧ್ವನಿಯಿಂದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.
ವರದಿಗಾರರು: ಶರಣಗೌಡ ಕಂದಕೂರ