ಮಸ್ಕಿ: ಭೋವಿ, ಬಂಜಾರ ಸಮಾಜಕ್ಕೆ ಅನ್ಯಾಯ

ಮಸ್ಕಿ: ಭೋವಿ, ಬಂಜಾರ ಸಮಾಜಕ್ಕೆ ಅನ್ಯಾಯ

e-ಸುದ್ದಿ ಮಸ್ಕಿ

ಮಸ್ಕಿ: ರಾಜ್ಯದ ಬಿಜೆಪಿ ಸರ್ಕಾರ ಒಳ ಮೀಸಲಾತಿ ಘೋಷಣೆ ಮಾಡುವ ಮೀಲಕ ಭೋವಿ, ಬಂಜಾರ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಬೆನ್ನಿಗೆ ಚೂರಿ ಹಾಕಿದೆ ಎಂದು ಭೋವಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಿಗರಿ ಆರೋಪಿಸಿದರು.
ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ನ್ಯಾ, ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚೆಗೆ ತರದೇ ಏಕಾಏಕಿ ಹಿಂಬಾಗಿಲ ಮೂಲಕ ಜಾರಿಗೆ ತರಲು ಹೋರಟಿರುವುದು ಈ ಸಮಾಜಗಳಿಗೆ ಮಾಡಿದ ಅನ್ಯಾಯ ಎಂದರು.
ಸರ್ಕಾರದ ನಿರ್ಧಾರವನ್ನು ಭೋವಿ ಸಮಾಜ ಖಂಡಿಸುತ್ತದೆ, ಮುಂಬರುವ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಅವರು ತಿಳಿಸಿದರು.
ಪುರಸಭೆ ಸದಸ್ಯ ರಮೇಶ ಗುಡಿಸಲಿ, ಮಾಜಿ ಸದಸ್ಯರಾದ ರಂಗಪ್ಪ ಅರಕೇರಿ, ಸಣ್ಣ ತಿಮ್ಮಣ್ಣ, ಸಾರಪ್ಪ, ಶಿವರಾಜ, ವೀರೇಶ, ಗ್ಯಾನಪ್ಪ, ಮಂಜುನಾಥ ಇತರರು ಇದ್ದರು.

Don`t copy text!