ಹೇರೂರ ಗ್ರಾಮದಲ್ಲಿ ಸಂಭ್ರಮದಿಂದ ನಡೆದ ಶ್ರೀಶೈಲ ಮಲ್ಲಯ್ಯ ಕಂಬಿಯ ಪೂಜಾ ಕಾರ್ಯಕ್ರಮ…
e-ಸುದ್ದಿ ವರದಿ; ಇಳಕಲ್
ಇಳಕಲ್: ತಾಲೂಕಿನ ಹೇರೂರ ಗ್ರಾಮದಲ್ಲಿ ಶ್ರೀಶೈಲ ಮಲ್ಲಯ್ಯನ ಕಂಬಿಯ ಪೂಜಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರಾ ಮಹೋತ್ಸವದ ನಂತರ ಹೇರೂರ ಗ್ರಾಮದಲ್ಲಿ ಮಲ್ಲಯ್ಯನ ಕಂಬಿಯ ಪೂಜಾ ಕಾರ್ಯಕ್ರಮ ಭಕ್ತರ ಮನೆಗಳಲ್ಲಿ ನಡೆಯಿತು.
ಗ್ರಾಮದ 30 ಕ್ಕೂಹೆಚ್ಚು ಭಕ್ತರ
ಮನೆಯಲ್ಲಿ ಶ್ರೀಶೈಲ ಮಲ್ಲಯ್ಯನ ಕಂಬಿಯ ಪೂಜಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಭಕ್ತರು ಮಲ್ಲಯ್ಯನ ಹಾಡುಗಳನ್ನು ಹಾಡುವ ಮೂಲಕ ಶ್ರೀಶೈಲ ಮಲ್ಲಯ್ಯನಿಗೆ ಭಕ್ತಿಯ ಪರಾಕಷ್ಟೇ ಮೆರೆದರು.
ವರದಿಗಾರರು: ಶರಣಗೌಡ ಕಂದಕೂರ