ಕುಡಿಯುವ ನೀರಿಗಾಗಿ
ಹಿರೇಓತಗೇರಿ ಗ್ರಾಮಸ್ಥರ ಪರದಾಟ…

e-ಸುದ್ದಿ ಇಳಕಲ್

ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ೫ ದಿವಸಗಳಿಂದ ಶುದ್ಧ ನೀರಿನ ಘಟಕ ಬಂದ್ ಆಗಿದ್ದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವಂಥ ಸ್ಥಿತಿ ಬಂದುದಾಗಿದೆ.

ಆದರೆ ವಿಪರ್ಯಾಸವೆಂದರೆ ಶುದ್ಧ ಕುಡಿಯುವ ನೀರಿನ ಘಟಕ ಯಾವುದೇ ಕಾರಣಗಳಿಂದ ಬಂದಾಗಿರುವುದಿಲ್ಲ, ಶುದ್ಧ ನೀರಿನ ಘಟಕದ ವ್ಯವಸ್ಥಾಪಕರು ಇರದೇ ಇರುವುದರಿಂದ, ಗುತ್ತಿಗೆದಾರರು ಬರದೇ ಇರುವುದರಿಂದ ನೀರಿನ ಘಟಕ ಬಂದಾಗಿದೆ, ಈ ಕಡೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗುತ್ತಿಗೆದಾರನ ಮೇಲೆ ಹಾಕಿದರೆ, ಗುತ್ತಿಗೆದಾರ ಮಾತ್ರ ಇತ್ತಕಡೆ ಸುಳಿಯುತ್ತಿಲ್ಲ, ಇವರಿಬ್ಬರ ನಡುವೆ ಕೂಸು ಬಡವಾತು ಎಂಬಂತೆ, ಸಾರ್ವಜನಿಕರು ಮಾತ್ರ ಕುಡಿಯುವ ನೀರು ಸಿಗದೇ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿಗಾಗಿ ದೂರದ ಇಳಕಲ್ ನಗರಕ್ಕೆ ಹೋಗಿ ತರಬೇಕಾದ ಸ್ಥಿತಿ ಬಂದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಬೇಸಿಗೆ ಕಾಲದಲ್ಲಿ ನೀರಿಗೆ ಆಹಾಕಾರ ಇರಬಾರದೆಂದು ಸರ್ಕಾರ ಕೋಟ್ಯಾನುಗಟ್ಟಲೇ ಖರ್ಚು ಮಾಡುತ್ತಿದೆ, ಆದರೆ ಇಲ್ಲಿ ಕುಡಿಯುವ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ನೀರಿನ ಘಟಕವನ್ನು ಪ್ರಾರಂಭ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹಿಸಿದ್ದಾರೆ.

ವರದಿಗಾರರು: ಶರಣಗೌಡ ಕಂದಕೂರ

Don`t copy text!