ಮುಖ್ಯಮಂತ್ರಿ ಯಾಕೆ ಬದಲಾಗಬಾರದು ? _ ಬಸವರಾಜ ಪಾಟೀಲ ಅನ್ವರಿ

e- ಸುದ್ದಿ, ಮಸ್ಕಿ

ಮುಖ್ಯಂತ್ರಿಗಳು ಬದಲು ಯಾಕಾಗಬಾರದು. ಮುಖ್ಯಮಂತ್ರಿಗಳನ್ನು ಬದಲು ಮಾಡುವುದು ಇಲ್ಲಿ ಯಾರ ಕೈಯಲ್ಲಿ ಇಲ್ಲ ಅದು ಹೈಕಮಾಂಡನವರೇ ತಿರ್ಮಾನಿಸುವರು. ಯಾಕೆಂದರೆ ಎಲ್ಲಾ ಪಕ್ಷಗಳಲ್ಲಿ ಹೈಕಮಾಂಡಗಳೇ ಶಾಸಕಾಂಗದ ನಾಯಕರನ್ನು ತಿರ್ಮಾನಿಸುತ್ತದೆ ಎಂದು ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ ಹೇಳಿದರು.


ಪಟ್ಟಣದ ಬಿಜೆಪಿ ಮುಖಂಡ ಕೆ.ವೀರನಗೌಡ ಪಾಟೀಲ್ ಅವರ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಜೆಪಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗದ ಪ್ರದೇಶದಲ್ಲಿ ಮುಖಂಡತ್ವದ ಕೊರತೆ ಇದೆ ಇದರಿಂದ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತವಾಗಿವೆ ಎಂದರು.
ಮುಂಬರುವ ಅಧಿವೇಶನಲ್ಲಿ ಈ ಭಾಗದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪಕ್ಷಾತೀತವಾಗಿ ಅಭಿವೃದ್ಧಿಗಾಗಿ ಗಟ್ಟಿದ್ವನಿ ಎತ್ತಬೇಕು ಅಂದಾಗ ಮಾತ್ರ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದರು. ಮುಂಬರುವ ಉಪಚುನಾವಣೆ ದೃಷ್ಟಿಯಿಂದ ನನಗೆ ಸಾಮಾನ್ಯ ಕಾರ್ಯಕರ್ತರನ ರೀತಿಯಲ್ಲಿ ಸಂಪರ್ಕ ಮಾಡಿದ್ದಾರೆ ಆದ್ದರಿಂದ ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಅಷ್ಟೇ ಯಾಕೆಂದರೆ ಪಕ್ಷದವರು ನನಗೆ ಯಾವುದೇ ಜವಬ್ದಾರಿಗಳು ಕೊಟ್ಟಿಲ್ಲ ಅಲ್ಲದೇ ನಾನು ಮುಖಂಡನೂ ಅಲ್ಲ ಎಂದರು. ಬಿಜೆಪಿ ಮುಖಂಡ ಕೆ.ವೀರನಗೌಡ ಪಾಟೀಲ್ ಇದ್ದರು.

 

Don`t copy text!