ಮಸ್ಕಿಯಲ್ಲಿ ಕಾರ್ಮಿಕರ ಮುಷ್ಕರ ಬೆಂಬಲಿಸಿ ನಾನಾ ಸಂಘಟನೆಗಳಿಂದ ಪ್ರತಿಭಟನೆ

e-ಸುದ್ದಿ, ಮಸ್ಕಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿರುದ್ಧ ಕಾರ್ಮಿಕ ಜಂಟಿ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಗಾಂಧಿನಗರದಿಂದ ಹಳೇ ಬಸ್ ನಿಲ್ದಾಣ, ಕನಕವೃತ್ತ, ವಾಲ್ಮೀಕಿ ವೃತ್ತದ ಮೂಲಕ ಬಸವೇಶ್ವರ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎಐಯುಟಿಯುಸಿ ಸಂಘಟನೆ ಜಿಲ್ಲಾ ಕಾರ್ಯದರ್ಶಿ ತಿರುಮಲರಾವ್ ಮಾತನಾಡಿ
ಬಡ ಕೂಲಿ ಕಾರ್ಮಿಕರು ಕರೊನಾ ವೈರಸ್ ಹಾವಳಿಯಿಂದ ಸರ್ಕಾರ ವಿಧಿಸಿದ್ದ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭಗಳಲ್ಲಿ ಬಡಜನರ ಹಾಗೂ ಕೂಲಿ ಕಾರ್ಮಿಕರ ಸಹಾಯಕ್ಕೆ ಬರುವುದು ಸರ್ಕಾರ ಬಡವರ ಸಹಾಯಕ್ಕೆ ಬರದೇ ವಂಚಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನವಿರೋದಿ ಕಾಯ್ದೆಗಳಿಂದ ರೈತರು ಕೂಲಿ ಕಾರ್ಮಿಕರು ಸೇರಿದಂತೆ ದುಡಿದು ತಿನ್ನುವ ವರ್ಗ ಬದುಕುವುದೇ ದುಸ್ತರವಾಗಿ ಪರಿಣಮಿಸಿದೆ ಎಂದರು.


ಕಾರ್ಮಿಕ ಮುಖಂಡ ಬಸವರಾಜ ಎಕ್ಕಿ ಮಾತನಾಡಿ ಕೇಂದ್ರ ಸರ್ಕಾರ 44 ಮಸೂದೆಗಳನ್ನು ಸಂಸತ್ತಿನಲ್ಲಿ ತಿದ್ದುಪಡಿ ಮಾಡಿ ಕಾರ್ಮಿಕರ ಕಾಯ್ದೆಗಳನ್ನು ದುರ್ಬಲಗೊಳಿಸಿದೆ. ಕೂಡಲೆ ಕೇಂದ್ರ ಸರ್ಕಾರ ಎಲ್ಲಾ ರೈತ ಹಾಗೂ ಕಾರ್ಮಿಕ ವಿರೋದಿ ಸಂಹಿತೆಗಳನ್ನು ಹಿಂದಕ್ಕೆ ತೆಗೆದುಕೊಂಡು ಖಾಸಗಿಕರಣವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಿಪ್ಪಯ್ಯ ಶೆಟ್ಟಿ, ಚಂದ್ರಸೇಖರ್ ಕ್ಯಾತ್ನಟ್ಟಿ, ಬಸಲಿಂಗಪ್ಪ, ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆ ಹಾಗೂ ಹಮಾಲಿ ಕಾರ್ಮಿಕ ಸಂಘಟನೆ ಸೇರಿದಂತೆ 16ಕ್ಕೂ ಅಧಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಿದ್ದರು.

.

Don`t copy text!