ಬೆಳಗಲ್ಲು ವೀರಣ್ಣ ಬಯಲಾದರು

ಬೆಳಗಲ್ಲು ವೀರಣ್ಣ ಬಯಲಾದರು

ಬೆಳಗಲ್ಲು ವೀರಣ್ಣ ಜಾನಪದ ಜಾದೂಗಾರ. ಬಳ್ಳಾರಿ ಜಿಲ್ಲೆಯ ಬೆಳಗಲ್ಲಿನಲ್ಲಿ ಕಲಾವಿದರ ಮನೆತನದಲ್ಲಿ ವೀರಣ್ಣನವರು ೧೯೩೦ ರ ಆಸುಪಾಸಿನಲ್ಲಿ ಜನಿಸಿದವರು, ಅಜ್ಜ ವಯೋಲಿನ್ ವಾದಕರು ತಂದೆ ಹನುಮಂತಪ್ಪನವರು ಕಲಾವಿದರು ಇದರಿಂದಾಗಿ ಇವರಿಗೆ ರಕ್ತದಲ್ಲಿಯೆ ಕಲೆ ವರವಾಗಿ ಬಂದಿತ್ತು ಇವರ ಸುಪುತ್ರ ಪ್ರಕಾಶರವರು ಉಪನ್ಯಾಸಕರು ಮತ್ತು ಕಲಾವಿದರಾಗಿ ತಂದೆಯ ಹೆಜ್ಜೆ ತುಳಿಯುತ್ತಿದ್ದಾರೆ.

ಕಮಲಾಬಾಯಿ ಚಟ್ಟೋಪಾಧ್ಯಾಯರವರ ಸಹಾಯದಿಂದ ತೊಗಲು ಬೊಂಬೆಯಾಟವನ್ನು ಬೆಳೆಸಿ,ಬಾಲ್ಯದಿಂದ ವರವಾಗಿ ಪಡೆದಿದ್ದ ಭಜನಾ ಹಾಡುಗಾರಿಕೆಯನ್ನು ತೊಗಲು ಬೊಂಬೆಯಾಟದಲ್ಲಿ ಸಮರ್ಥವಾಗಿ ಬಳಸಿಕೊಂಡು ಬೆಳೆಸಿದ್ದಾರೆ.

ವೀರಣ್ಣನವರ ಕಲೆ ಕಂಡ ಗಮಕಿ ಜೋಳದರಾಶಿ ದೊಡ್ಡನಗೌಡರು,ಚಂದ್ರಶೇಖರಯ್ಯನವರು ಮುಕ್ತಕಂಠದಿಂದ ಹೊಗಳಿದ್ದರು.ಸ್ವಾತಂತ್ರ್ಯ ಸಂಗ್ರಾಮ,ಮಹಾತ್ಮ ಗಾಂಧಿ, ರಾಮಾಯಣ ,ಮಹಾಭಾರತ,ಪಂಚವಟಿ ಸನ್ನಿವೇಶಗಳನ್ನು ತಮ್ಮ ಬಯಲಾಟ ನಾಟಕ ಮತ್ತು ತೊಗಲು ಬೊಂಬೆ ಆಟದಲ್ಲಿ ಪ್ರದರ್ಶಿಸಿ ನೈಪುಣ್ಯ ಪಡೆದವರು.ಕರ್ನಾಟಕ ನಾಟಕ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಹಂಪೆಯ ನಾಡೋಜ ಪ್ರಶಸ್ತಿ ಇವರನ್ನು ಹುಡುಕಿ ಹೋಗಿತ್ತು,ಬೇರೆ ಬೇರೆ ವಿದೇಶಗಳಲ್ಲಿ ತಮ್ಮ ಕಲೆಯನ್ನು ತಂಡದೊಂದಿಗೆ ಪ್ರದರ್ಶಿಸಿ ಮೆಚ್ಚುಗೆ ಪಡೆದುದ್ದಲ್ಲದೇ ನಾಡಿನ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದ ವೀರಣ್ಣನವರ ಸಾವು ಜಾನಪದ ಲೋಕಕ್ಕೆ ತಂಬಲಾರದ ನಷ್ಠವಾಗಿದೆ.

ಶಂಕರ್.ಜಿ.ಬೆಟಗೇರಿ ವೀರಣ್ಣನವರ ಅಭಿಮಾನಿ

Don`t copy text!