ಇಂದಿನಿಂದ ಪ್ರತಿ ಸೋಮವಾರ ಹೊಸ ಅಂಕಣ-ಶರಣರ ಪರಿಚಯ, ವಚನ ವಿಶ್ಲೇಷಣೆ

e-ಸುದ್ದಿ ಓದುಗರಿಗೆಲ್ಲ ಶರಣು ಶರಣಾರ್ಥಿಗಳು,

ಪ್ರತಿ ಸೋಮವಾರ ಶರಣರ ಪರಿಚಯ ಮತ್ತು ವಚನ‌ ವಿಶ್ಲೇಷಣೆ ಯನ್ನು ಬೆಳಗಾವಿಯ ಲೇಖಕಿ ಶ್ರೀಮತಿ ಸುಧಾ ಪಾಟೀಲ ಬರೆಯಲಿದ್ದಾರೆ. ಸುಧಾ ಪಾಟೀಲ ಅವರ ಪರಿಚಯ ಹೀಗಿದೆ

ಶ್ರೀಮತಿ ಸುಧಾ ಪಾಟೀಲ್. ಬೆಳಗಾವಿಯವರು ಇವರು ಓದಿದ್ದು
ಬಿ. ಎಸ್ಸಿ ( ಗೃಹ ವಿಜ್ಞಾನ ) ಬೆಂಗಳೂರುನಲ್ಲಿ ವೃತ್ತಿಯಿಂದ ಗೃಹಿಣಿ ಹಾಗೂ ಸಾಹಿತಿ

ಇವರ ಕೃತಿಗಳು

* 2019 ರಲ್ಲಿ ಕಿತ್ತೂರು ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಡಾ. ಜ . ಚ . ನಿ ಅವರ ಬದುಕು- ಬರಹ (ಸಂಗ್ರಹ ) ಕಿರುಹೊತ್ತಿಗೆ ಉದ್ಘಾಟನೆಯಾಗಿದೆ.
* 2019 ರಲ್ಲಿ ಚೇತನಾ ಫೌಂಡೇಶನ್ ನವರ ” ಸಂಪದ ” ಪುಸ್ತಕದಲ್ಲಿ ಕವನಗಳು,
* 2018-20 ರ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ “ದಾಸೋಹ0 ” ವಿಶೇಷ ಸಂಚಿಕೆಯ ಸಂಪಾದಕೀಯ ಕಾರ್ಯ,
*2020 ರಲ್ಲಿ ಎ. ಎಸ್. ಮಕಾನದಾರ ಅವರ ” ಸೋಜುಗದ ಸೂಜು ಮಲ್ಲಿಗೆ ” ಯಲ್ಲಿ ಕವನಗಳು,
* 2021 ರಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಪ್ರಕಟಣೆಗೊಂಡ ” ಸಮಾಗಮ ” ಪುಸ್ತಕದಲ್ಲಿ ಕವನಗಳು,
* ರೋಷ್ಟ್ರಮ್ ಡೈರೀಸ್ ವತಿಯಿಂದ ಸಹ ಕವನಗಳು ಪ್ರಕಟಗೊಂಡಿವೆ.
* ಸ್ಮರಣಸಂಚಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ, ಬೇರೆ ಬೇರೆ ಸಾಹಿತಿಗಳ ಪುಸ್ತಕಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ.

ಪ್ರಶಸ್ತಿ / ಪುರಸ್ಕಾರಗಳು

*2019 ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಚೇತನಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ …. ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಹಾಗೂ ಕನ್ನಡ ಪರ ಕಾಳಜಿಯನ್ನು ಗಮನಿಸಿ “ರಾಜ್ಯೋತ್ಸವ ಪ್ರಶಸ್ತಿ ” ,

*ಯುರೋಪ್ ಖಂಡದ ರೋಮ್ ನಲ್ಲಿ ನಡೆದ ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ “ಮಿನರ್ವ ಅವಾರ್ಡ್ “,

*ಬೆಳಗಾವಿಯಲ್ಲಿ ನಡೆದ ಸಮ್ಮೇಳನದಲ್ಲಿ ” ದತ್ತಿ ಪ್ರಶಸ್ತಿ “,
ಪೃಥ್ವಿ ಫೌಂಡೇಶನ್ ವತಿಯಿಂದ
” ಅನುಪಮ ಸೇವಾ ರತ್ನ “ಪ್ರಶಸ್ತಿ
ಗಳು ದೊರಕಿವೆ.

ದತ್ತಿನಿಧಿ

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದಲ್ಲಿ ನಮ್ಮ ಅತ್ತೆಯವರಾದ ದಿ. ರಾಚಮ್ಮ ಪಾಟೀಲ್ ಅವರ ಹೆಸರಿನಲ್ಲಿ ಅತ್ಯುತ್ತಮ ಕವಿಯಿತ್ರಿಗೆ ದತ್ತಿಪ್ರಶಸ್ತಿ ,
ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಸುಧಾ ಪಾಟೀಲ ಅವರ ತಂದೆಯವರಾದ ದಿ. ಶ್ರೀ ಬಿ. ಎಂ. ಪಾಟೀಲ್ ಅವರ ಹೆಸರಿನಲ್ಲಿ ಅತ್ಯುತ್ತಮ ಲೇಖಕಿಗೆ ದತ್ತಿಪ್ರಶಸ್ತಿ ಪ್ರತಿವರ್ಷ ಕೊಡುತ್ತ ಬಂದಿದ್ದಾರೆ.

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಚುಟುಕು ಸಾಹಿತ್ಯ ಪರಿಷತ್.. ಬೆಳಗಾವಿ, ಕನ್ನಡ ಸಾಹಿತ್ಯ ಪರಿಷತ್… ಬೆಳಗಾವಿ,
ಲಿಂಗಾಯತ ಮಹಿಳಾ ಸಮಾಜ, ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ, ಶರಣ ಸಾಹಿತ್ಯ ಸಮ್ಮೇಳನ,
ಅಖಿಲ ಭಾರತ ವೀರಶೈವ ಮಹಾಸಭಾ ದಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ನಡೆಯುವ ಎಲ್ಲ ಸಾಮಾಜಿಕ ಕಾರ್ಯಗಳಲ್ಲಿ ನನ್ನ ಅಳಿಲುಸೇವೆ ಸದಾ ಇರುತ್ತದೆ
ಸಂಗೀತ , ನೃತ್ಯ, ನಾಟಕಗಳಲ್ಲಿ ಆಸಕ್ತಿ
ಮ್ಯಾರಥೋನ ( ಸಾಮಾಜಿಕ ಉದ್ದೇಶಗಳ ಸಲುವಾಗಿ ನಡೆಯುವ ) ಗಳಲ್ಲಿ ಭಾಗವಹಿಸುತ್ತಾರೆ.

ಸುಧಾ ಪಾಟೀಲ ಅವರು ಇನ್ನೂ ಮುಂದೆ ಪ್ರತಿ ಸೋಮವಾರ ವಚನಕಾರರ ಪರಿಚಯ ಮತ್ತು ವಚನ ವಿಶ್ಲೇಷಣೆ ಮಾಡಲಿದ್ದಾರೆ. e-ಸುದ್ದಿ ಓದುಗರು ಎಂದಿನಂತೆ ಸ್ವಾಗತಿಸಿ , ಓದಿ, ಲೇಖನಗಳು ಇಷ್ಟವಾದಲ್ಲಿ ಶೇರ್ ಮಾಡಿ, ಚರ್ಚೆ ಮಾಡಿ, ಅಭಿಪ್ರಾಯ ತಿಳಿಸಿ.

-ಸಂಪಾದಕ

 

Don`t copy text!