ನೀರು, ನೀರು,ನೀರು ನೀರಿಗಾಗಿ ಹಿರೇಓತಗೇರಿ ಗ್ರಾಮಸ್ಥರ ಹರಸಾಹಸ,ಕಣ್ಮುಚ್ಚಿ ಕುಳಿತ ಅಧಿಕಾರಿಗಳು…
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ ಒಂದು ವಾರದಿಂದ ಶುದ್ಧ ನೀರಿನ ಘಟಕ ಬಂದ್ ಆಗಿದ್ದರಿಂದ ಕುಡಿಯುವ ನೀರಿಗಾಗಿ ಜನರು ನೀರು,ನೀರು,ನೀರು ಎಂಬಂತಾಗಿದೆ..
ಹಿರೇ ಓತಗೇರಿ ಗ್ರಾಮದಲ್ಲಿ 5 ಬೋರವೆಲ್ ಗಳಿದ್ದರೂ ನೀರಿಗಾಗಿ ದಿನನಿತ್ಯ ಪರಾದಡುವುದು ಮಾತ್ರ ತಪ್ಪಿಲ್ಲ.ಅಧಿಕಾರಿಗಳ ನಿಷ್ಕಾಳಜಿಯಿಂದ ಗ್ರಾಮದಲ್ಲಿ ನೀರಿನ ಭವಣೆ ತಿರುತ್ತಿಲ್ಲ, ದಿನನಿತ್ಯ ಹಿಗೆಯೆ ಆದರೆ ಜನರ ಪರಿಸ್ಥಿತಿ ಅಯೋಮಯವಾಗಿದೆ.
ಕುಡಿಯುವ ನೀರಿಗಾಗಿ ದೂರದ ಇಳಕಲ್ ನಗರಕ್ಕೆ ಹೋಗಿ ತರಬೇಕಾದ ಸ್ಥಿತಿ ಬಂದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬೇಸಿಗೆ ಕಾಲದಲ್ಲಿ ನೀರಿಗೆ ಆಹಾಕಾರ ಇರಬಾರದೆಂದು ಸರ್ಕಾರ ಕೋಟ್ಯಾನುಗಟ್ಟಲೇ ಖರ್ಚು ಮಾಡುತ್ತಿದೆ, ಆದರೆ ಇಲ್ಲಿ ಕುಡಿಯುವ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ನೀರಿನ ಘಟಕವನ್ನು ಹಾಗೂ ಬಳಸುವ ನೀರು ಬೇಗನೆ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹ.
ವರದಿಗಾರರು: ಶರಣಗೌಡ ಕಂದಕೂರ