ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ
ಶೆಟ್ಟಿಯೆಂಬನೆ ಸಿರಿಯಾಳನ?
ಮಡಿವಾಳನೆಂಬನೆ ಮಾಚಯ್ಯನ?
ಡೋಹರನೆಂಬನೆ ಕಕ್ಕಯ್ಯನ?
ಮಾದಾರನೆಂಬನೆ ಚನ್ನಯ್ಯನ?
ಆನು ಹಾರವನೆಂದಡೆ ಕೂಡಲ ಸಂಗಯ್ಯ ನಗುವನಯ್ಯಾ.
ಎಂದು ಹೇಳುತ್ತ ಸಾವಿರಾರು ವರ್ಷಗಳಿಂದ ವರ್ಣಾಶ್ರಮದ ಪದ್ದತಿಯಲ್ಲಿ ನರಳುತ್ತಿದ್ದ ದೇಶದ ಜನತೆಯನ್ನು ಜಾತಿ, ಕುಲ, ಗೋತ್ರಗಳ ಬಂಧನದಿಂದ ಮುಕ್ತಮಾಡಿ ಜಾತಿಯ ಬೇರನ್ನು ಬುಡಮೆಲು ಮಾಡಿ “ಶ್ವಪಚನಾದಡೇನು ಶಿವಭಕ್ತನೆ” ಕುಲಜನು ಎಂದು ಸಾರಿ ಜನತೆಯನ್ನು ಸರ್ವ ಸ್ವತಂತ್ರರನ್ನಾಗಿ ಮಾಡಿ ಕಾಯಕ ದಾಸೋಹಗಳ ರಾಷ್ಟ್ರಪ್ರೇಮದ ಸಂದೇಶವನ್ನು ಸಾರಿದರು.
ನೂರಾರು ದೇವರುಗಳೆಂದು ಒಡೆದು ಹೋದ ದೇಶದ ಜನತೆಯನ್ನು “ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತಾಡಬೇಡ, ದೇವನೊಬ್ಬನೆ ಕಾಣಿರೊ” ಎಂದು ಸತ್ಯಸಂದೇಶ ಸಾರಿ ಜನತೆಯನ್ನು ಒಂದುಗುಡಿಸಿದರು. ಶಿಕ್ಷಣದ ಗಂಧವೇ ಗೋತ್ತಿಲ್ಲದವರಿಗೆ ಶಿಕ್ಷಣದ ಸೌಕರ್ಯ ಒದಗಿಸಿದರು. ಹೆಣ್ಣುಮಕ್ಕಳು ಸಹಿತವಾಗಿ ಶಿಕ್ಷಣ ಪಡೆದ ತಮ್ಮ ಸ್ವಾನುಭಾವದ ಮೂಲಕ ಎಲ್ಲರೂ ವಚನಗಳನ್ನೂ ರಚಿಸುವ ಸಾಮಥ್ರ್ಯ ತಂದುಕೊಂಡರು. ಇದರ ಪರಿಣಾಮವಾಗಿಯೇ ಕನ್ನಡ ಸಾಹಿತ್ಯ ವಿಶ್ವಸಾಹಿತ್ಯವಾಯಿತು. ಬಸವಾದಿ ಶರಣರು ಸಂಸ್ಥಾಪಿಸಿದ ಶಿವಧವರ್i ವಿಶ್ವಸಾಹಿತ್ಯವಾಯಿತು ಬಸವಾದಿ . ಆಚರವಂತರೆ ದೊಡ್ಡವರು, ಅನಾಚಾರಿಗಳೇ ಸಣ್ಣವರೆಂದು ಸಾರಿದರು.