e-ಸುದ್ದಿ ಇಂಪ್ಯಾಕ್ಟ್,
ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ,ಶುದ್ಧಕುಡಿಯವ ನೀರು ಘಟಕ ಪ್ರಾರಂಭ….
e-ಸುದ್ದಿ ಇಳಕಲ್
ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮದಲ್ಲಿ
ಕುಡಿಯುವ ನೀರಿಗಾಗಿ ಹಿರೇಓತಗೇರಿ ಗ್ರಾಮಸ್ಥರ ಪರದಾಟ ಎಂಬ ಶಿರ್ಷೆಕೆಯಡಿ ನಿನ್ನೆಯ ದಿವಸ e-ಸುದ್ದಿ ವರದಿ ಬಿತ್ತರಿಸಿತ್ತು.ಅದರಂತೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳಾದ ಪಿ ಸುನಿಲ್ ಕುಮಾರ್ ಅವರಿಗೆ ತಿಳಿಸಿದಾಗ ತಕ್ಷಣವೇ ಸ್ಪಂದಿಸಿ ಅಧಿಕಾರಿಗಳಿಗೆ ತಿಳಿಸಿ ಮತ್ತೆ ಪ್ರಾರಂಭ ಮಾಡಿಸಿದರು.
ಅಲ್ಲದೆ ಸ್ಪಂದಿಸಿದ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಗ್ರಾಮದ ಜನರು ಧನ್ಯವಾದ ತಿಳಿಸಿದರು.
ಸ್ಥಳೀಯ ಮಟ್ಟದ ಪ್ರತಿಯೊಂದು ಸಮಸ್ಯೆಗಳಿಗೂ ಮೇಲಾಧಿಕಾರಿಗಳಿಗೆ ತಿಳಿಸುವುದಕ್ಕಿಂತ ಮುಂಚೆ ಆ ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬುದು ನಮ್ಮ ಆಶಯ.
ವರದಿಗಾರರು: ಶರಣಗೌಡ ಕಂದಕೂರ