ಸಮಾನತೆಯೇ ಮನುಷ್ಯನ ಆದ್ಯ ಕರ್ತವ್ಯ ;ಡಾ. ಚನ್ನಬಸವದೇಶಿಕೇಂದ್ರ ಶಿವಾಚಾರ್ಯರು..

e-ಸುದ್ದಿ ಕಂದಗಲ್

ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಘ ಕಂದಗಲ್ ಮತ್ತು ಇಲಕಲ್ ಲಯನ್ಸ್ ಕ್ಲಬ್ ನ ವತಿಯಿಂದ ಕಂದಗಲ್ ಗ್ರಾಮದಲ್ಲಿ ಸೌಹಾರ್ದ ಇಪ್ತಾರ ಕೋಟವನ್ನು ಆಯೋಜನೆ ಮಾಡಲಾಗಿತ್ತು.

ಈ ಕಾರ್ಯಕ್ರಮವನ್ನು ನಂದವಾಡಗಿಯ ಶ್ರೀಗಳು ಉದ್ಘಾಟಿಸಿ ನೆರೆದ ಜನತೆಗೆ ಸಮಾನವಾಗಿ ಬದುಕಬೇಕು ಸಮಾನತೆಯೇ ಮನುಷ್ಯನ ಆದ್ಯ ಕರ್ತವ್ಯ ಎಂಬುದರ ಬಗ್ಗೆ ಪ್ರವಚನವನ್ನು ನೀಡಿದರು. ಇಲಕಲ್ಲಿನ  ಜನಾಬ್ ಲಾಲ್ ಹುಸೇನ್ ಕಂದ್ಗಲ್ ಮತ್ತು ಡಾಕ್ಟರ್ ಏನ್ ಎಂ ಬಿಳೆಕುದುರೆ ರವರು ಆಗಮಿಸಿ ನೆರೆದ ಜನಗಳಿಗೆ ಸೌಹಾರ್ದತೆಯ ಬಗ್ಗೆ ತಿಳಿಸಿಕೊಟ್ಟರು

ಲಯನ್ಸ್ ಕ್ಲಬ್ನ ಚೆರ್ ಪರ್ಸನ್ ಆದಂತ ಡಾ ಶ್ರೀಧರ್ ಕುರುಡಗಿ ಗದಗನಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಂದಗಲ್ ಗ್ರಾಮದ ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದ ಲಾಭವನ್ನ ಪಡೆದುಕೊಂಡರು. ಕಾರ್ಯಕ್ರಮವನ್ನು ವೀರೇಶ್ ಶಿoಪಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ರಾಜಸಾಬ್ ಪರಾಸರವರು ವಂದಿಸಿದರು.
ಪ್ರಶಾಂತ್ ಬನ್ನಿಗೋಳ್, ವೆಂಕಣ್ಣ ಮಳ್ಳಿ, ಸಂತೋಷ್ ಮ್ಯಾಗಡಿ, ಮತ್ತಿತರರು ಉಪಸ್ಥಿತರಿದ್ದರು.

 

ವರದಿಗಾರರು; ಶರಣಗೌಡ ಕಂದಕೂರ

Don`t copy text!