ಬುದ್ಧ… ಬರಹ…

ಬರೆಯಬಹುದಿತ್ತು ಬುದ್ಧನ ಕುರಿತು…
ಭದ್ಧತೆಯ ದಾರಿಯಲಿ ನಾ ನಡೆದಿದ್ದೆ ಆಗಿದ್ದರೆ…
ಬರೆಯಬಹುದಿತ್ತೆನೊ…..

ಅರಿವ ಹರವಿ ಜ್ಞಾನದ ಜ್ಯೋತಿ ಹಚ್ಚಿದ ಮಹಾವೀರನ ಕುರಿತು
ಮನಸ್ಸನ್ನು ನಿಗ್ರಹಿಸಿಕೊಂಡಿದ್ದರೆ ಬರೆಯಬಹುದಿತ್ತೆನೊ….

ರಾತ್ರಿ ಯಾಕೆ ಎದ್ದ…
ಬಿಟ್ಟು ಯಾಕೆ ನಡೆದ…
ಅವ ಬಿಟ್ಟ ಬದುಕ ಬಣ್ಣಗಳ
ಎಣಿಸುವದ ಬಿಟ್ಟು..
ನಿಶ್ಶಬ್ದಕೆ ಮನ ಕೊಟ್ಟಿದ್ದೆ ಆಗಿದ್ದರೆ ಬರೆಯಬಹುದಿತ್ತೆನೊ….

ಭುವಿಗೇ ಬುದ್ಧನಾದವನಿಗೆ ಬುದ್ಧಿ ಹೇಳ ಬಯಸಿ ಬರಿದೆ ಬಡಬಡಿಸುತ್ತ ನಡೆಯದಿದ್ದರೆ ಬರೆಯಬಹುದಿತ್ತೆನೊ…

ತನ್ನ ತಾನರಿತವನ…
ಅರಿಯದೆ ಅಗುಳಿಗಂಬಲಿಸಿ..
ಹಪಹಪಿಸದಿದ್ದರೆ
ಬರೆಯಬಹುದಿತ್ತೆನೊ….

ಬರೆಯದೆ ಹೊದೆ
ಬದುಕ ಬದುಕದೆ ಹೊದೆ
ಬರಿ ಢಂಭವ ಕೊಚ್ಚಿ
ಢಾಂಬಿಗಳಾಗಿ
ಬರಿಯದೆ ಹೊದೆ….
ಬದುಕ ಅರಿಯದೆ ಹೊದೆ…

✍️ಸರ್ವಮಂಗಳಾ ಅರಳಿಮಟ್ಟಿ ಬೆಳಗಾವಿ

Don`t copy text!