‘ಹನಿಗಳು’
ಬಯಕೆ ಬಸಿರಾಗಿ ಬಿತ್ತಲು
ಒಂದು ಹನಿ
ಹನಿ ಹನಿಗಳು ಕೂಡಿ
ಹೆಣ್ಣಾದಳು
ಹೆತ್ತು ಹೊತ್ತು
ಹೆಣ್ಣು ಹಣ್ಣಾದಳು
ಹರಿದ ರಕ್ತದ ಹನಿ
ಸುರಿವ ಬೆವರಿನ ಹನಿ
ಒತ್ತರಿಸಿ ಬರುವ ಕಣ್ಣಹನಿ
ಹರಿಯುವಿಕೆ
ಸುರಿಯುವಿಕೆ
ಒತ್ತರಿಸುವಿಕೆ
ನಿರಂತರ ಚಲನೆ
ಚಲನೆಯ ಜೀವಂತಿಕೆಯಲಿ
ಬದುಕಿದ್ದಾಳೆ
ಹೆಣ್ಣು ಹನಿಯಾಗಿ.
–ಡಾ.ವೀಣಾ ಹೂಗಾರ ಧಾರವಾಡ