ಹಾಯ್ಕುಗಳು

ಹಾಯ್ಕುಗಳು

ಹಾಯ್ಕುಗಳಲ್ಲಿ
ಅಕ್ಕನ ಚರಿತೆಯ
ಹೇಳುವೆ ಕೇಳಿ.

ಹನ್ನೆರಡನೇ
ಶತಮಾನ ಶರಣ
ಸಾಹಿತ್ಯ ಯುಗ.

ವಚನಗಳಲ್ಲಿ
ಸಾರ್ವಕಾಲಿಕ ಸತ್ಯ
ಮೆರೆದವರು.

ಅಕ್ಕಮಾದೇವಿ
ಶರಣಸಾಹಿತ್ಯದ
ಮೇರು ವ್ಯಕ್ತಿತ್ವ

ತಾಯಿ ಸುಮತಿ
ನಿರ್ಮಲಶೆಟ್ಟಯರ
ಮಗಳು ಅಕ್ಕ.

ಉಡುತಡಿಯ
ಮಗಳು, ಮಹಾದೇವಿ
ಇವಳ್ಹೆಸರು.

ಆಧ್ಯಾತ್ಮದಲ್ಲಿ
ಮಿಂದೆದ್ದಳು ಮನವ
ಶುದ್ಧಗೈದಳು

ಒಲಿದು ಬಂದ
ಕೌಶಿಕನ ತೊರೆದು
ಮುನ್ನಡೆದಳು.

ಕೇಶಾಂಬರಿಯು
ರೂಪರಾಶಿಯ ಮುಚ್ಚಿ
ಮನ ಬೆತ್ತಲು.

ಜಗದ ಗಂಡ
ಬೇಡೆಂದು ಕಾಮಗೆದ್ದ
ಮಗಳಿವಳು.

ಲೋಕ ಜಂಜಡ
ತೊರೆದು ಇಷ್ಟಲಿಂಗ
ಪತಿಯೆಂದಾಕೆ.

ಮಹಾದೇವಿಯು
ಶರಣಕುಲಕ್ಕೆಲ್ಲ
ಅಕ್ಕನಾದಳು.

ಮಲ್ಲಿಕಾರ್ಜುನ
ದೇವನ ಪತಿಯಾಗಿ
ಪಡೆದವಳು.

ವೈರಾಗ್ಯ ನಿಧಿ
ಆಧ್ಯಾತ್ಮ ಶಿಖರದ
ಮೇರು ಪರ್ವತ.

ಕಾಡು ಮೇಡನು
ಅಲೇದು ಕಲ್ಯಾಣವ
ಸೇರಿದವಳು.

ಶರಣ ಸತಿ
ಲಿಂಗ ಪತಿ ಭಾವದಿ
ಮೆರೆದ ಶಕ್ತಿ.

ಶರಣ ಕುಲ
ಮೆಚ್ಚುವಂತೆ ಬಾಳ್ವೆಯ
ಮಾಡಿದವಳು.

ಅಲ್ಲಮ ಪ್ರಭು
ಅಕ್ಕನ ವ್ಯಕ್ತಿತ್ವಕ್ಕೆ
ಶರಣೆಂದರು.

ಅಪ್ಪ ಬಸವ
ಅಕ್ಕನನ್ನು ಜಗಕೆ
ತೋರಿದವರು.

ಶ್ರಿಗಿರಿಯೆಡೆ
ಪತಿಯನರಸುತ್ತ
ಸಾಗಿದ ಭಕ್ತೆ

ಖಗಮೃಗಕೆ
ಪತಿಯ ತೊರಿರೆಂದ
ಹಂಬಲದಾಕೆ.

ಆತ್ಮ ಸಂಗಾತಿ
ಅನುದಿನ ಅರಸಿ
ಸಾಗಿದವಳು.

ಕದಳಿ ಸೇರಿ
ಪತಿಯ ಬೆರೆದಳು
ಕುಲಸತಿಯು.

ಸ್ರ್ತೀ ಕುಲಕ್ಕೆಲ್ಲ
ಮಾಣಿಕ್ಯವಾದವಳು
ಅಕ್ಕಮಾದೇವಿ.

ಗಟ್ಟಿ ಮನವು
ದಿಟ್ಟ ನಿಲುವು ಎಷ್ಟು
ಹೇಳಲಿ ಅಕ್ಕಾ.

ಸ್ವತಂತ್ರ ರೂಪ
ಬಯಲ ಸ್ವರೂಪದ
ಚಿತ್ಕಳೆ ಅಕ್ಕಾ.

ಸವಿತಾ ಮಾಟೂರು ಇಳಕಲ್

Don`t copy text!