ಭರವಸೆ

ಭರವಸೆ

ಬರಿದಾದ ಮನದಲ್ಲಿ
ಆಸೆಗಳು ಮೂಡಲೇಬೇಕು
ಬಡವ ಶ್ರೀಮಂತನಾಗುವ
ಶ್ರೀಮಂತ ಬಡವನಾಗುವ ಕಾಲವು ಬಂದೆ ಬರುವುದು
ಇದಕೆ ಸಾಕ್ಷಿಯಾಗಿ ನಿಂತಿಹುದು
ಇಲ್ಲಿರುವ ವೃಕ್ಷವು

ಮರವು ಮೈದುಂಬಿ ಬೆಳೆದು
ಚಿಗುರಿ ಎಲೆಗಳನ್ನೊತ್ತು ನಿಂತಿತ್ತು ಆನಂದದಿ.
ಆದರೆ ಇಂದು!!!!
ಉದುರಿ ಹೋದವು ಎಲ್ಲಾ ಎಲೆಗಳು.
ಮರವು ಚಿಂತಿಸದು ನನ್ನ ಜೀವವು ಇಷ್ಟೇ ಎಂದು!!!
ಭರವಸೆ ಇಹುದು ಮರಕೆ
ಮತ್ತೆ ಹಸಿರೆಲೆಗಳು ಮೂಡುವುದೆಂದು!!!!
ಎಲ್ಲವೂ ಕ್ಷಣಿಕವೆಂಬ
ಭಾವನೆಯು ಮರುಕಳಿಸುತಿಹುದು.

ಅರೆ, ದಿನಗಳುರುಳಿದಂತೆ ಮತ್ತೆ
ಚಿಗುರಿತು ಎಲೆಗಳು
ಹೂವು ಮೈದುಂಬಿ ನಿಂತಿತು
ಮರದಲಿ
ಮರವು ಸಂತಸಗೊಂಡಿತು.
ಜೀವನದಿ ನಿರಾಸೆಯ ಕಂಡ ಮನುಜನಿಗೆ ಭರವಸೆ ತುಂಬಿತು ಮರವು.

ಮನುಜರೆಲ್ಲರೂ ಕೇಳಿರಿಲ್ಲಿ
ಇಂದಲ್ಲಾ ನಾಳೆ ಎಲ್ಲರ ಬಾಳಲ್ಲೂ ಬರುವುದು ಶುಭದಿನವು.
ಏನೇ ಆಗಲಿ ಸಾವಧಾನದಿ‌ ಸಾಗುತಲಿರಿ~ ಸಾಗುತಲಿರಿ ನನ್ನಂತೆ
ಕತ್ತಲು ತುಂಬಿದ ಮನಕೆ
ಬೆಳಕು ಕಾಣುವುದು ಎಂಬ ಸತ್ಯವ ತಿಳಿಸಿತು ಈ ವೃಕ್ಷವು

-ಮಾಸ್ತಿ ಬಾಬು
ಅಧ್ಯಾಪಕರು, ಲೇಖಕರು, ಸಾಹಿತಿ
ಐರಾ ಅಕಾಡೆಮಿ, ಬೆಂಗಳೂರು

Don`t copy text!