ಗಜ಼ಲ್

ಗಜ಼ಲ್

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ
ನೀತಿ ಬಿಟ್ಟ ಬದುಕು ಬಾಳೀತು ಹೇಗೆ

ಕತ್ತಲೆಯ ಹಾದಿಯಲಿ ಬಳ್ಳಿ ಹಾವಾಗುವುದು
ಶಂಕೆ ಮೂಡಿದ ಮನದಿ ಒಲವು ತಾಳೀತು ಹೇಗೆ

ಕಾನನದ ಕುಸುಮ ಪರಿಮಳವ ಬೀರುತಿದೆ
ಪಂಜರದ ಹಕ್ಕಿ ತಾ ಗೂಡಿಗೆ ತೆರಳೀತು ಹೇಗೆ

ಜೊತೆಯಾಗಿ ನಡೆವ ಪಥ ಶಪಥವೇತಕೆ ಬೇಕು
ಮೋಸದಲಿ ಬಿಟ್ಟ ಕೈ ತಿರುಗಿ ಹೊರಳೀತು ಹೇಗೆ

ಕನವರಿಸಿ ಕಾದಳು ಮರುಳ ಬೇಗಂ ನಿನಗಾಗಿ
ಕಳೆದ ಚಂದದ ಗಳಿಗೆ ಮತ್ತೆ ಮರಳೀತು ಹೇಗೆ

ಹಮೀದಾ ಬೇಗಂ ದೇಸಾಯಿ ಸಂಕೇಶ್ವರ

Don`t copy text!